Published
4 hours agoon
By
Akkare News
ನಂತರ ಶಾಲಾ ಮುಖ್ಯೋಪಾಧ್ಯಾಯರು ಎಲ್ಲರನ್ನು ಸ್ವಾಗತಿಸಿದರು ಶಾಲಾ ಸಂಸ್ಕೃತ ಶಿಕ್ಷಕರಾದ ಶ್ರೀ ಕುಶಲರವರು ಸಂಸ್ಕೃತ ಸಪ್ತಾಹದ ಬಗ್ಗೆ ಮತ್ತು ರಕ್ಷಾಬಂಧನದ ಮಹತ್ವವನ್ನು ಹಾಗೂ ರಕ್ಷಾಬಂಧನ ಆಚರಿಸುವ ಉದ್ದೇಶವನ್ನು ಮಕ್ಕಳಿಗೆ ತಿಳಿಸಿದರು. ಕೋಶಾಧಿಕಾರಿಗಳಾದ ಶ್ರೀ ಹರೀಶ್ ಪುತ್ತೂರಾಯರು ಸಂಸ್ಕೃತ ಭಾಷೆಯಲ್ಲಿ ಮಾತನಾಡುವುದರ ಮೂಲಕ ಮಾತುಗಳನ್ನು ಪ್ರಾರಂಭಿಸಿದ ಅವರು ಪ್ರತಿ ನೂಲು ಸೇರಿಕೊಂಡು ಒಂದು ರಕ್ಷೆಯಾಗಿದ್ದು ಅದು ಒಗ್ಗಟ್ಟನ್ನು ಸೂಚಿಸುತ್ತದೆ. ಪ್ರತಿಯೊಬ್ಬನ ಕುಟುಂಬದಲ್ಲಿ ಒಗ್ಗಟ್ಟನ್ನು ಅಳವಡಿಸಿ ವಸುದೈವಕುಟುಂಬವನ್ನು ಸ್ಥಾಪಿಸಿ ಒಗ್ಗಟ್ಟಿನಿಂದ ಬದುಕಲು ಅವಕಾಶ ಸಿಗುತ್ತದೆ ಎಂದರು. 
ನಂತರ ಪ್ರಾಂತೀಯ ಮಟ್ಟ ಯೋಗಾಸನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ತಾಲೂಕು ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ ,ಬುಲ್ ಬುಲ್ ಎಲ್ಲಾ ವಿಭಾಗಗಳು ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಶಾಲಾ ಅಧ್ಯಕ್ಷರು ಬಹುಮಾನವನ್ನು ವಿತರಿಸಿದರು. ನಂತರ ಮಾತನಾಡಿದ ಸಭಾಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರರವರು ಸಂಸ್ಕೃತದ ಮಹತ್ವವನ್ನು ತಿಳಿಸುತ್ತಾ ರಕ್ಷೆ ಕಟ್ಟಿದಾಗ ಇವರು ನಮ್ಮವರು ಎಂದು ತಿಳಿದು ಸಹಾಯ ಮಾಡುವ ಮನೋಭಾವನೆ ಇರುತ್ತದೆ. ಈ ರಕ್ಷೆ ಹೊರಗಿಂದ ಬರುವ ಯಾವುದೇ ಅಪಾಯದಿಂದ ರಕ್ಷಣೆ ಪಡೆಯಲಿ ಎಂದು ಆಶಿಸುತ್ತೇನೆ. ಇಂದು ಸಂಸ್ಕೃತ ದಿನವನ್ನು ಆಚರಿಸುತ್ತಿದ್ದೇವೆ. ಹಿಂದೆ ಸಾಮಾನ್ಯ ವಿದ್ಯೆ ಇರುವವರಿಗೂ ಸಂಸ್ಕೃತ ಬರುತಿತ್ತು. ಆದರೆ ಪರಕೀಯರ ಆಕ್ರಮಣದಿಂದ ಸಂಸ್ಕೃತ ಭಾಷೆಯನ್ನು ನಾವೇ ಮರೆತೆವು. ಮಂತ್ರವನ್ನು ಕೇಳುವುದರ ಜೊತೆಗೆ ಅರ್ಥವನ್ನು ತಿಳಿಯುತ್ತೇವೆ. ಸಂಸ್ಕೃತ ಕಲಿತಾಗ ನಿತ್ಯ ಮಾಡುವ ಕ್ರಿಯೆಗೆ ವಿಶೇಷ ಅರ್ಥ ಸಿಗುತ್ತದೆ. ಸಂಸ್ಕೃತದ ಸಾಮಾನ್ಯಜ್ಞಾನವನ್ನು ಕಲಿಯುವಂತವರಾಗಿ ಎಂದರು.
ನಂತರ ವಿದ್ಯಾರ್ಥಿಗಳಿಂದ ರಾಖೀ ಧಾರಣೆ ನಡೆಯಿತು. ನಂತರ ಸ್ಕೌಟ್ ಮಕ್ಕಳಿಂದ ದೇಶಭಕ್ತಿಗೀತೆ ಸಣ್ಣ ಮಕ್ಕಳಿಂದ ಸಂಸ್ಕೃತ ಗೀತೆಯನ್ನು ಹಾಡಲಾಯಿತು. ನಂತರ ಸಹ ಶಿಕ್ಷಕರಾದ ಶ್ರೀ ರಮೇಶ್ ರವರು ರಕ್ಷಾ ಬಂಧನದ ಕುರಿತು ಹಾಗೂ 10ನೇ ತರಗತಿಯ ವಿದ್ಯಾರ್ಥಿನಿ ಯಾದ ಸಿಂಚಿತ ಸಂಸ್ಕೃತ ಸಪ್ತಾಹ ದ ಬಗ್ಗೆ ಮಾತನಾಡಿದರು. ಶ್ರೀಮತಿ ಸುಕನ್ಯಾ ರವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ನಯನರವರು ಧನ್ಯವಾದ ಗೈದರು. ಶಾಲಾ 10ನೇ ತರಗತಿಯ ವಿದ್ಯಾರ್ಥಿ ಗಳಾದ ವಿಶಾಖಾ ಮತ್ತು ಆರಾಧ್ಯ ರವರು ಪ್ರಾರ್ಥಿಸಿದರು.




