Published
21 hours agoon
By
Akkare News
ಅವರು ಆಗಸ್ಟ್ 30 ಭಾನುವಾರ ಮಾಣಿ ಘಟಕದ ಸಮಾಜ ಸೇವಾ ನಿರ್ದೇಶಕ ಸುರೇಶ್ ಬಾಕಿಲ ಅವರ ಮನೆಯಲ್ಲಿ, ಯುವವಾಹಿನಿ(ರಿ.) ಮಾಣಿ ಘಟಕವು ಆಯೋಜಿಸಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮದಲ್ಲಿ. ಗುರು ಸಂದೇಶ ನೀಡಿ ಮಾತನಾಡಿದರು. ಮಾಣಿ ಘಟಕದ ಅಧ್ಯಕ್ಷ ಗಣೇಶ್ ಕೊಡಾಜೆ ಮಾತನಾಡಿ, ಯುವವಾಹಿನಿ(ರಿ.) ಮಾಣಿ ಘಟಕವು ನಡೆಸಿಕೊಂಡು ಬರುತ್ತಿರುವ ಮನೆ ಮನೆಗೆ ಗುರುತತ್ವ ಸಂದೇಶವು,ಗುರುಗಳ ತತ್ವ, ಸಮಾಜದಲ್ಲಿ ಅವರು ಮಾಡಿದ ಸಾಮಾಜಿಕ ಕ್ರಾಂತಿ, ಜಗಕ್ಕೆ ಸಾರಿದ ಸಂದೇಶವನ್ನು ಪ್ರತಿ ಮನೆ ಹಾಗೂ ಮನಗಳಿಗೆ ಮುಟ್ಟಿಸುವ ಕೆಲಸವನ್ನು ಮಾಡುತ್ತಿದೆ,ಗುರುಗಳು ಎಲ್ಲಾ ಸಮಾಜದ ಗುರುಗಳು ಮತ್ತು ಅವರ ಜೀವನದ ಚರಿತ್ರೆಯನ್ನು ಎಲ್ಲರು ತಿಳಿಯುವುದು ಮತ್ತು ತಿಳಿಸುವುದರ ಬಗ್ಗೆ ನಾವೆಲ್ಲರೂ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಘಟಕದ ನಾರಾಯಣ ಗುರುತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾದ ಶ್ರೀಧರ ಮುಜಲಾ, ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದ ಕಟ್ಟಡ ಸಮಿತಿಯ ಅಧ್ಯಕ್ಷ ನಾರಾಯಣ ಸಾಲ್ಯಾನ್, ಮಾಜಿ ಅಧ್ಯಕ್ಷರು,ಪದಾಧಿಕಾರಿಗಳು, ಊರಿನ ಗೌರವಾನ್ವಿತ ಸದಸ್ಯರು ಹಾಗೂ ಘಟಕದ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಘಟಕದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ದರ್ಖಾಸು ಸ್ವಾಗತಿಸಿ, ಡಾ. ತ್ರಿವೇಣಿ ರಮೇಶ್ ಮುಜಾಲ ವಂದಿಸಿದರು



