Connect with us

ಇತರ

ಖರ್ಗೆ ಭಾಷಣದ ಸ್ಥಳ ಶುದ್ಧೀಕರಣ, ಕೃತ್ಯ ಖಂಡಿಸಿ ಕಾಂಗ್ರೆಸ್ ವತಿಯಿಂದ ಮೌನ ಪ್ರತಿಭಟನೆ

Published

on

ನೂರು ಮೋದಿ, ಮೋಹನ್ ಭಾಗವತ್ ಗಳು ಬಂದರೂ ರಾಹುಲ್ ಗಾಂಧಿ ನಾಯಕತ್ವವನ್ನು ಅಳಿಸಲು ಸಾಧ್ಯವಿಲ್ಲ, ಎಚ್. ಮಹಮ್ಮದ್ ಆಲಿ

ಪುತ್ತೂರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣದ ಸ್ಥಳ ಶುದ್ಧೀಕರಣ ಕೃತ್ಯದ ಹಾಗೂ ರಾಹುಲ್ ಗಾಂಧಿಯವರ ಮೇಲೆ ಎಫ್ ಐ ಆರ್ ದಾಖಲಿಸಿರುವುದರ ವಿರುದ್ಧ ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಆಶ್ರಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪುತ್ತೂರು ಬಸ್ ನಿಲ್ದಾಣದ ಬಳಿಯ ಗಾಂಧಿ ಕಟ್ಟೆಯಲ್ಲಿ ಗಾಂಧಿ ಪ್ರತಿಮೆಯ ಬಳಿ ಬಾಯಿಗೆ ಕಪ್ಪು ಪಟ್ಟಿ ಕಟ್ಟಿ ಮೌನ ಪ್ರತಿಭಟನೆ ನಡೆಸಿದರು.

 
ಪ್ರತಿಭಟನೆಯನ್ನು ಉದ್ದೇಶಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಚ್. ಮೊಹಮ್ಮದ್ ಅಲಿ ರವರು ಮಾತನಾಡಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ಶುದ್ದೀಕರಿಸಿದ ಸಂಘ ಪರಿವಾರ ಸಂಘಟನೆಗಳು ಅಸ್ಪೃಶ್ಯತೆಯ ಮಾನಸಿಕತೆ ಹೊಂದಿದೆ.ಈ ಮೂಲಕ ದೇಶದ ಜನರ ಮೇಲೆ ಮನುಸ್ಮೃತಿ ಹೇರಲು ಪ್ರಯತ್ನಿಸುತ್ತಿದೆ. ಇದು ಸಂವಿಧಾನಕ್ಕೆ ಮಾಡಿದ ಅಪಮಾನ ಈ ರೀತಿ ಬಿಜೆಪಿ ದಲಿತ ಸಮುದಾಯವನ್ನು ಕೀಳಾಗಿ ಕಾಣುತ್ತಿದೆ ಎಂದು ಆರೋಪಿಸಿದರು.ಭಾರತದ ಸಂವಿಧಾನದಲ್ಲಿ ಎಲ್ಲಾ ಸಮುದಾಯದವರನ್ನು ಸಮಾನತೆಯಿಂದ ನೋಡಬೇಕೆಂದಿದೆ, ಆದರೆ ಬಿಜೆಪಿ ಮತ್ತು ಸಂಘಪರಿವಾರ ಸಂಘಟನೆಗಳು ಭಾರತದ ಸಂವಿಧಾನವನ್ನು ಧಿಕ್ಕರಿಸುವ ಕೆಲಸ ಮಾಡುತ್ತಿದೆ, ದಲಿತ ಸಮುದಾಯದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವುದನ್ನು ಸಹಿಸದೆ ಅವರನ್ನು ಅಪಮಾನಿಸುವ ಕೆಲಸ ಮಾಡುತ್ತಿದೆ.. ಕಾಂಗ್ರೆಸ್ ಪಕ್ಷ ದಲಿತ ಸಮುದಾಯ ಸೇರಿ ದೇಶದಲ್ಲಿರುವ ತಳ ಸಮುದಾಯದ ಶ್ರೇಯೋಭಿವೃದ್ದಿಗೆ ಕಾರ್ಯಕ್ರಮ ರೂಪಿಸಿ ಅಸ್ಪೃಶ್ಯತೆಯನ್ನು ತೊಡೆದು ಹಾಕುವ ಕೆಲಸ ಮಾಡಿದೆ ಆದರೆ ಬಿಜೆಪಿ ಮತ್ತು ಸಂಘಪರಿವಾರ ಸಂಘಟನೆಗಳು ಇಂತಹ ತಳ ಸಮುದಾಯವನ್ನು ದ್ವೇಷಿಸುವ ಕೆಲಸ ಮಾಡುತ್ತಿದೆ.
ಸಂಘ ಪರಿವಾರ ಗರಡಿಯಲ್ಲಿ ಪಳಗಿದ ಬಿಜೆಪಿ ನಾಯಕರು ಸಂವಿಧಾನವನ್ನು ಬದಲಿಸುತ್ತೇವೆ, ಎಂದು ಅವರು ಹೇಳಿದರು. ಮೀಸಲಾತಿಯನ್ನು ತೆಗೆಯುತ್ತೇವೆ ಎಂಬ ಹೇಳಿಕೆಯನ್ನು ನೀಡುವ ಸಭೆಗಳಲ್ಲಿ ದಲಿತ ಯುವಕರು ಚಪ್ಪಾಳೆ ತಟ್ಟುತ್ತಿದ್ದಾರೆ ಹಾಗೂ ಬಿಜೆಪಿಯ ಹಿಂದೆ ಹೋಗುತ್ತಿದ್ದಾರೆ ಅವರಿಗೆ ಗೊತ್ತಿಲ್ಲ ನಮ್ಮನ್ನು ನಾಶ ಮಾಡುವವರನ್ನುನಾವು ಹಿಂಬಾಲಿಸುತ್ತಿದ್ದೇವೆ ಎಂಬುದನ್ನು.. ಸಂಘ ಪರಿವಾರದ ಹಿಡೆನ್ ಅಜೆಂಡಾ ತಿಳಿಯದೆ..ಅವರನ್ನು ಹಿಂಬಾಲಿಸುವ ತಳ ಸಮುದಾಯದ ಯುವಕರು ಎಚ್ಚೆತ್ತು ಕೊಳ್ಳಬೇಕಾಗಿದೆ. ಎಂದ ಅವರು ಬಿಜೆಪಿಯ ಕೇಂದ್ರ ಸರಕಾರ ನಮ್ಮ ನಾಯಕ ರಾಹುಲ್ ಗಾಂಧಿಯವರ ಮೇಲೆ ಸುಳ್ಳು ಕೇಸ್ ದಾಖಲಿಸುವ ಮೂಲಕ ಕಿರುಕುಳ ನೀಡುವ ಕೆಲಸ ಮಾಡುತ್ತಿದೆ.
ಸಂಘ ಪರಿವಾರ ಸಂಘಟನೆಗಳು ನಿರಂತರವಾಗಿ ರಾಹುಲ್ ಹಾಗೂ ಸೋನಿಯಾ ಗಾಂಧಿಯನ್ನು ಹೀಯಾಳಿಸುವ ಕೆಲಸವನ್ನು ಮಾಡುತ್ತಿದೆ. ನೂರು ಮೋದಿಗಳು ನೂರು ಮೋಹನ್ ಭಗವತ್ ಗಳು ಬಂದರೂ ರಾಹುಲ್ ಗಾಂಧಿಯ ನಾಯಕತ್ವವನ್ನು ಅಳಿಸಲು ಎಂದಿಗೂ ಸಾಧ್ಯವಿಲ್ಲ.. ಎಂದವರು ಹೇಳಿದರು. ಬಿಜೆಪಿಯವರ ಹಾಗೆ ಕಾಂಗ್ರೆಸ್ ದ್ವೇಷ ಸಾಧನೆ ಮಾಡುತ್ತಿದ್ದರೆ ಬಿಜೆಪಿ ಮತ್ತು RSS ಭಾರತದ ಭೂಪಟದಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದರು.
ಪುತ್ತೂರು ವಿಧಾನಸಭಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಡಾ ರಾಜಾರಾಮ ಕೆ ಬಿ ರವರು ಸ್ವಾಗತಿಸಿ ಪ್ರಾಥಮಿಕವಾಗಿ ಮಾತನಾಡಿ 21ನೇ ಶತಮಾನದ ಕಾಲದಲ್ಲೂ ಕೂಡ ದೇಶದಲ್ಲಿ ಅಸ್ಪ್ರಶ್ಯತೆ ತಾಂಡವಾಗುತ್ತಿರುವುದು ಖಂಡನೀಯ ಖರ್ಗೆ ರವರು ಮಾತನಾಡಿ ಹೋದ ವೇದಿಕೆಯನ್ನು ಶುದ್ಧೀಕರಣ ಮಾಡುವ ನೆಪದಲ್ಲಿ ಅವರಿಗೆ ಅವಮಾನ ಮಾಡಿರುವುದು ಪ್ರತಿಯೊಬ್ಬರು ಒಕ್ಕೋಲರಿಂದ ಖಂಡಿಸಬೇಕಾಗಿದೆ ಎಂದು ಅವರು ಹೇಳಿದರು ಬಿಜೆಪಿಯವರು ಧರ್ಮ ಧರ್ಮದ ಮಧ್ಯೆ ಭೇದ ಮಾಡುವಷ್ಟೇ ಅಲ್ಲದೆ ಹಿಂದೂ ಧರ್ಮದ ದಲಿತರನ್ನು, ಹಿಂದುಳಿದ ವರ್ಗದವರನ್ನು, ತಾರತಮ್ಯ ಮಾಡುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಒಂದು ವರ್ಗಕ್ಕೆ ಮಾಡಿದ ಘೋರ ಅಪಮಾನ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮದ ಮೊದಲು ಪ್ರತಿಭಟನೆಯ ಮೊದಲು ಗಾಂಧಿ ಕಟ್ಟೆಯಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ರವರು ಮಾತನಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವ ಕೃತ್ಯ ಇಡೀ ಒಂದು ವರ್ಗದವರಿ ಮಾಡಿದ ಘೋರ ಅಪಮಾನವಾಗಿದೆ ಎಂದು ಅವರು ಹೇಳಿದರು.

 
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕರಾದ ಎನ್. ಚಂದ್ರಹಾಸ ಶೆಟ್ಟಿ, ಶಶಿಕಿರಣ್ ರೈ, ಮಾಜಿ ಜಿ.ಪಂ.ಸದಸ್ಯ ಸೋಮನಾಥ, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ,ರಮನಾಥ ವಿಟ್ಲ ವಿಟ್ಲ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಣಚ ಭೂ ನ್ಯಾಯ ಮಂಡಳಿ ಸದಸ್ಯ ಅಬ್ದುಲ್ ರಹಿಮಾನ್ ಯೂನಿಕ್, ಪುತ್ತೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಮಾಜಿ DCC ಸದಸ್ಯ ಬೊಳೋಡಿ ಚಂದ್ರಹಾಸ ರೈ, ನಗರ ಕಾಂಗ್ರೆಸ್ ಮಾಜಿ ಪದಾಧಿಕಾರಿಗಲಾದ ವಿಲ್ಫ್ರೆಡ್ಸ್ ಪೆರ್ನಂಡೀಸ್ ಉರ್ಲಾಂಡಿ, ಸುರೇಶ್ ಪೂಜಾರಿ ಮೊಟ್ಟೆತಡ್ಕ, ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ ಏಲ್ನಾಡುಗುತ್ತು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರೋಷನ್ ರೈ ಬನ್ನೂರು, ಬೂತ್ ಅಧ್ಯಕ್ಷರುಗಳಾದ ಇಸ್ಮಾಯಿಲ್ ಸಾಲ್ಮರ, ರೋಷನ್ ಭಂಡಾರಿ ಹಾರಾಡಿ,ಶರತ್ ಕೇಪುಲು, ಮಹಾಬಲ ಪೂಜಾರಿ ಬನ್ನೂರು, ರೋಷನ್ ಡಯಾಸ್ ಬೆಳಿಯಪ್ಪ ಪೂಜಾರಿ ರೋಟರಿಪುರ,ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಂತೋಷ್ ರೈ ಚಿಲ್ಮೆತ್ತಾರ್, ಹಾರಿಸ್ ಸಂಟ್ಯಾರ್, ಮುಂಡಪ್ಪ ನೆಕ್ಕರೆ, ಆದಮ್ ಕಲ್ಲರ್ಪೆ, ಯೂಸೂಫ್ ತಾರಿಗುಡ್ಡೆ,ಮೋನಪ್ಪ ಕೆರೆಮೂಲೆ,, ಕೆನೂಟ್ ಮಸ್ಕರೇನಸ್, ನೆಕ್ಕಿಲಾಡಿ, ಮಾಜಿನಗರ ಸಭಾ ಸದಸ್ಯ ದಿನೇಶ್ ಸೇವಿರೆ, ವೇದನಾಥ ಸುವರ್ಣ, ಶರೀಫ್ ಬಲ್ನಾಡ್, ಶರೀಫ್ ರಾಯಲ್ ಬುಳೇರಿಕಟ್ಟೆ, ಪದ್ಮನಾಭ ಗೌಡ ಕೊಡಿಪ್ಪಾಡಿ, ಬಾಬು ಮರಿಕೆ ಮೊದಲಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement