Published
3 months agoon
By
Akkare Newsಅಧ್ಯಕ್ಷರು: ಉಮೇಶ್ ಕಾವಡಿ, ಗೌರವಾಧ್ಯಕ್ಷ: ರಾಧಾಕೃಷ್ಣ, ಉಪಾಧ್ಯಕ್ಷೆ: ಸುಜಾತ, ಕಾರ್ಯದರ್ಶಿ: ಜಯಚಂದ್ರ, ಖಜಾಂಚಿ: ಅಶ್ವಿನಿ, ಸಂಘಟನಾ ಕಾರ್ಯದರ್ಶಿ: ಶರಣ್ಯ, ರಾಜ್ಯ ಪ್ರತಿನಿಧಿ:ನರಿಯಪ್ಪ
ಪುತ್ತೂರು: ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘವನ್ನು ಪುನರ್‌ರಚನೆ ಮಾಡಲಾಯಿತು. ಸೆ.17 ರಂದು ಪುತ್ತೂರು ಗ್ರಾಮ ಚಾವಡಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಎಲ್ಲಾ ಸದಸ್ಯರ ಒಮ್ಮತದ ಮೇರೆಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಉಮೇಶ್ ಕಾವಡಿ, ಗೌರವಾಧ್ಯಕ್ಷರಾಗಿ ರಾಧಾಕೃಷ್ಣ, ಕಾರ್ಯದರ್ಶಿಯಾಗಿ ಜಯಚಂದ್ರ, ಉಪಾಧ್ಯಕ್ಷೆಯಾಗಿ ಸುಜಾತ ಕೃಷ್ಣಕುಮಾರ್ ರೈ, ಖಜಾಂಚಿಯಾಗಿ ಅಶ್ವಿನಿ, ಸಂಘಟನಾ ಕಾರ್ಯದರ್ಶಿಯಾಗಿ ಶರಣ್ಯ ಹಾಗೂ ರಾಜ್ಯ ಪ್ರತಿನಿಧಿಯಾಗಿ ನರಿಯಪ್ಪ ಮಠದ್‌ರವರನ್ನು ತಾಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಒಮ್ಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು. ನರಿಯಪ್ಪ ಮಠದ್ ಸ್ವಾಗತಿಸಿ, ವಂದಿಸಿದರು.
‘