ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ರೋಟರಿ ಯುವ ಪೂರ್ವಾಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹಾಗೂ ಆರ್. ಐ ಚಂದ್ರು ನಾಯ್ಕ್ ಅವರ ಮುತುವರ್ಜಿ ಅನಾರೋಗ್ಯ ಪೀಡಿತ ನಿರ್ಗತಿಕ ವ್ಯಕ್ತಿಯ ರಕ್ಷಣೆ ಆಸ್ಪತ್ರೆಗೆ ದಾಖಲೆ

Published

on

ಪುತ್ತೂರು, ಕಳೆದ ಮೂರು ನಾಲ್ಕು ದಿನಗಳಿಂದ ಕಬಕದ ಬಸ್ಸು ತಂಗುದಾಣದಲ್ಲಿ ಅನಾರೋಗ್ಯ ಪೀಡಿತನಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಸುಮಾರು 67 ವಯಸ್ಸಿನ ಗದಗ್ ಮೂಲದ ರೋಣ ನಿವಾಸಿ ನೀಲಪ್ಪ ಎಂಬ ವಯೋವೃದ್ಧ ಓರ್ವನನ್ನು ರೋಟರಿ ಕ್ಲಬ್ ಪುತ್ತೂರು ಯುವಾ ಇದರ ಪೂರ್ವಾಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಹಾಗೂ ಉಪ್ಪಿನಂಗಡಿಯ ಕಂದಾಯ ನಿರೀಕ್ಷಕರಾದ ಚಂದ್ರು ನಾಯ್ಕ್ ಅವರ ಮುತುವರ್ಜಿಯಲ್ಲಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆ ಹಿನ್ನೆಲೆ: ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷ ವಾಕ್ಯದಲ್ಲಿ ನಡೆಯುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ಪುತ್ತೂರಿನಿಂದ ಬಂಟ್ವಾಳಕ್ಕೆ ಬೀಳ್ಕೊಡುವ ಸಂದರ್ಭದಲ್ಲಿ ಪುತ್ತೂರಿನ ಗಡಿಭಾಗವಾದ ಕಬಕ ಬಸ್ಸು ತಂಗುದಾಣ ದ ಬಳಿ ಬೆಳಿಗ್ಗೆ 9 ಗಂಟೆಗೆ ಬೀಳ್ಕೊಡುವ ಸಮಯದಲ್ಲಿ ಪಕ್ಕದಲ್ಲಿ ಇದ್ದ ಬಸ್ಸು ತಂಗು ದಾಣ ದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಈ ವ್ಯಕ್ತಿಯನ್ನು ಗಮನಿಸಿದ ಪುತ್ತೂರು ಉಮೇಶ್ ನಾಯಕ್ ಅವರು ಆತನಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ವಿಚಾರಿಸುವ ಸಮಯದಲ್ಲಿ, ನಡೆಯಲೂ ಆಗದ ಆಹಾರ ನುಂಗಲು ಆಗದ ಅಸಹಾಯಕ ಸ್ಥಿತಿಯಲ್ಲಿದ್ದ ಈತನ ತೀವ್ರ ಅನಾರೋಗ್ಯದ ವಿಚಾರ ಬೆಳಕಿಗೆ ಬಂದು108 ವಾಹನದಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.

 

 

 

ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಈತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗುವುದು, ಗುಣಮುಖರಾದ ಬಳಿಕ ಈತನನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗುವುದು. ಈ ಕಾರ್ಯಾಚರಣೆಯಲ್ಲಿ ಶ್ರೀಮತಿ ಗೀತಾ ಕೊಂಕೋಡಿ ಹಾಗೂ ಸ್ಥಳೀಯರು ಸಹಕರಿಸಿದರು

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement