Published
9 months agoon
By
Akkare News
ಸರ್ವೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಶಾಸಕರಾದ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಸರ್ವೆ ರಾಘವೇಂದ್ರ ಮಠ ಸಭಾಂಗಣದಲ್ಲಿ ನಡೆಯಿತು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಸರ್ವೆ ವಲಯ ಉಸ್ತುವಾರಿ ರವೀಂದ್ರ ನೆಕ್ಕಿಲು, ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷ ಕಮಲೇಶ್ ,ತಾಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಬ್ಲಾಕ್ ಪ್ರ.ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಶಿವನಾಥ ರೈ ಮೇಗಿನಗುತ್ತು,ಮುಂಡೂರು ಸಿ ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಂಡೂರು, ವಲಯ ಕಾರ್ಯದರ್ಶಿ ಸಿದ್ದಿಕ್ ಸುಲ್ತಾನ್,ಬೂತ್ ಅಧ್ಯಕ್ಷರುಗಳಾದ ಅಶೋಕ ಎಸ್ ಡಿ, ಹನೀಫ್ ಕಲ್ಪನೆ,ಹಮೀದ್ ನೇರೋಳ್ತಡ್ಕ ,ಗ್ರಾಪಂ ಸದಸ್ಯರುಗಳಾದ ರಸಿಕ ಶಿವನಾಥ ರೈ, ಮಹಮ್ಮದಾಲಿ ನೇರೋಲ್ತಡ್ಕ, ಮಹಿಳಾ ಘಟಕದ ವಲಯಾಧ್ಯಕ್ಷ ಗೀತಾ ಮರಿಯ, ರಾಮಚಂದ್ರ ಸೊರಕೆ, ಮಾಜಿ ತಾಪಂ ಸದಸ್ಯೆ ಸುಮತಿ ಮೊದಲಾದವರು ಉಪಸ್ಥಿತರಿದ್ದರು.












