Published
8 months agoon
By
Akkare News
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಉತ್ತಮ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ಹಲವೆಡೆ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಬೆಳಗ್ಗೆ, ಮಧ್ಯಾಹ್ನ ಭಾರೀ ಗಾಳಿ-ಮಳೆಗೆ ವ್ಯಾಸನಗರ ಬಳಿ ಮರ, ವಿದ್ಯುತ್ ಕಂಬ ಧರೆಗುರುಗಳಿದ್ದು, ಸ್ವಲ್ಪ ಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.


ಸುಳ್ಯ ವರದಿ
ಸುಳ್ಯ: ತಾಲೂಕಿನಲ್ಲಿ ಬೆಳಗ್ಗೆ ಗಾಳಿ ಸಹಿತ ಭಾರೀ ಮಳೆ ಯಾಗಿದ್ದು, ಬಳಿಕ ಮಧ್ಯಾಹ್ನ ಮತ್ತು ಸಂಜೆಯೂ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ನಗರದ ವಿವಿಧೆಡೆ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಳೆ ನೀರು ರಸ್ತೆಯಲ್ಲೇ ಹರಿದು ಜನರಿಗೆ ತೊಂದರೆಯಾಯಿತು. ಸಂಪಾಜೆ ಗ್ರಾಮದ ಗೂನಡ್ಕ ಎಂಬಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಹಿಂಭಾಗಕ್ಕೆ ಮರದ ಗೆಲ್ಲು ಮುರಿದು ಬಿದ್ದು ಕಾರು ಜಖಂಗೊಂಡಿದೆ. ಗಾಳಿ ಮಳೆಗೆ ಸುಳ್ಯ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯ ವಿವಿಧೆಡೆ ಮರ, ಮರದ ಗೆಲ್ಲು ಬಿದ್ದು ವಿದ್ಯುತ್ ಕಂಬ, ಲೈನ್‌ಗೆ ಹಾನಿ ಸಂಭವಿಸಿದೆ.

ಇಂದು “ಆರೆಂಜ್ ಅಲರ್ಟ್’
ಮುನ್ಸೂಚನೆ ಪ್ರಕಾರ ಜೂ. 26ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂ. 27 ಮತ್ತು 28ರಂದು ಎಲ್ಲೋ ಅಲರ್ಟ್ ಇದ್ದು, ಗಾಳಿ-ಮಳೆಯ ಸಾಧ್ಯತೆ ಇದೆ.






