Connect with us

ಇತ್ತೀಚಿನ ಸುದ್ದಿಗಳು

ಬೆಳ್ತಂಗಡಿಯಲ್ಲಿ ಸೌಜನ್ಯ ಪರ ನ್ಯಾಯದ ನಡಿಗೆ: ಬೃಹತ್ ಮೌನ ಮೆರವಣಿಗೆ, ಗೌರವ ಅಭಿನಂದನಾ ಸಭೆ

Published

on

ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ, ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡಿದ ನ್ಯಾಯವಾದಿಗಳು ಹಾಗೂ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಅ.10ರಂದು ಗೌರವ ಅಭಿನಂದನಾ ಸಭೆ ಮತ್ತು ಸೌಜನ್ಯ ಪರ ನ್ಯಾಯದ ಹೋರಾಟಗಾರರ ಸಹಭಾಗಿತ್ವದಲ್ಲಿ ನ್ಯಾಯದ ನಡಿಗೆ ಮೆರವಣಿಗೆ ನಡೆಯಿತು.ಬೆಳಗ್ಗೆ 11 ಗಂಟೆಗೆ ಉಜಿರೆಯ ಕುಂಜರ್ಪದಿಂದ ಆರಂಭವಾದ ಮೌನ ಮೆರವಣಿಗೆ ಬೆಳ್ತಂಗಡಿ ಮುಖ್ಯ ರಸ್ತೆಯ ಮೂಲಕ ಸಾಗಿ ತಾಲೂಕು ಕ್ರೀಡಾಂಗಣ ತಲುಪಿತು. ಬಳಿಕ ನಡೆದ ಅಭಿನಂದನಾ ಸಭೆಯಲ್ಲಿ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಮಹಿಳಾ ಹೋರಾಟಗಾರ್ತಿ ಪ್ರಸನ್ನ ರವಿ, ಹೈಕೋರ್ಟ್ ನ್ಯಾಯವಾದಿ ಮೋಹಿತ್ ಕುಮಾರ್, ದೈವ ಚಿಂತಕ ತಮ್ಮಣ್ಣ ಶೆಟ್ಟಿ, ಸೌಜನ್ಯಳ ತಾಯಿ ಕುಸುಮಾವತಿ ಮಾತನಾಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ನ್ಯಾಯವಾದಿಗಳಾದ ವಿಜಯ ವಾಸು ಪೂಜಾರಿ, ನವೀನ್ ಕುಮಾರ್, ದಿನೇಶ್ ಗಾಣಿಗ ಕುಂದಾಪುರ, ನೀತಿ ತಂಡದ ಜಯಂತ್ ಟಿ., ಅಹೋರಾತ್ರ, ಸುಪ್ರೀಂಕೋರ್ಟ್ ನ್ಯಾಯವಾದಿ ಶೇಖರ್ ಜಿ ದೇವಸ್ಯ ಅವರ ಸಹೋದರ ಕೃಷ್ಣಪ್ಪ ಗೌಡ ದೇವಸ್ಯ, ಬಾಂಬೆಯಲ್ಲಿ ಸೌಜನ್ಯ ಪರ ಜನರನ್ನು ಒಗ್ಗೂಡಿಸಿದ ಸುರೇಶ್ ಎಯ್ಯಾಡಿ ಉಪಸ್ಥಿತರಿದ್ದರು. ಸಾವಿರಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಭಾಗಿಯಾಗಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement