Connect with us

ಇತರ

ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಸ್ಥಾಪಕರ ದಿನಾಚರಣೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ

Published

on

ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ದಿನಾಂಕ 26/06/2025 ರಂದು ಶ್ರೀ ಗೋಪಾಲಕೃಷ್ಣ ಮಂದಿರ ವೇದಿಕೆಯಲ್ಲಿ ಸ್ಥಾಪಕರ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ನಡೆಸಲಾಯಿತು.

ಈ ಸಂದರ್ಭ ದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ, ಅಧ್ಯಕ್ಷರ ಧರ್ಮಪತ್ನಿ ಶ್ರೀಮತಿ ಕುಮಾರಿ, ಮಕ್ಕಳಾದ ಶ್ರೀ ವೇಣುಗೋಪಾಲ ಎಸ್ ಜೆ ಮತ್ತು ಶ್ರೀ ಅಂಬರೀಷ ಎಸ್ ಜೆ, ಅತಿಥಿಗಳಾದ ಶ್ರೀ ಕೆ ಸುರೇಶ್ ಶೆಟ್ಟಿ, ಸದಸ್ಯರು, ಅಂಬಿಕಾ ಮಹಾವಿದ್ಯಾಲಯ ಪುತ್ತೂರು ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರು, ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ,ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀ ಎಸ್ ಜಿ ಕೃಷ್ಣ, ಶ್ರೀ ಪ್ರಸನ್ನ ಭಟ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ರಾಕೇಶ್ ರೈ ಕೆಡೆಂಜಿ, ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಾತನಾಡಿ ಅಧ್ಯಕ್ಷರಿಗೆ ಜನ್ಮದಿನದ ಶುಭಾಶಯ ಕೋರಿದರು.

ಅತಿಥಿಗಳು ಮಾತನಾಡಿ ಒಂದು ವ್ಯಕ್ತಿಯ ಪರಿಚಯ ಗುಣನಡತೆ, ಕಾರ್ಯ, ಶಿಸ್ತು ಇಂತಹ ಎಲ್ಲಾ ಗುಣ ನಮ್ಮ ಶಿಬರರವರಲ್ಲಿ ಇದೆ. ನಮ್ಮ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ಸಾಂದೀಪನಿ ಶಾಲೆಯ ಮಕ್ಕಳು ಬಹಳ ಶಿಸ್ತುವಂತರಾಗಿದ್ದಾರೆ. ಎಂದು ಅಧ್ಯಕ್ಷರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹಾರೈಸಿದರು.

ಶಾಲಾ ಸಂಚಾಲಕರು ಮಾತನಾಡಿ ಇಂತಹ ವಾತಾವರಣದಲ್ಲಿ ಮಾತನಾಡಲು ಅವಕಾಶ ಮಾಡಿದವರು ಹಾಗೂ ಶಾಲೆಯ ಜವಾಬ್ದಾರಿ ವಹಿಸಲು ಕಾರಣ ಜಯರಾಮ ಕೆದಿಲಾಯರು
ಎಂದು ಅಧ್ಯಕ್ಷರಿಗೆ ಹುಟ್ಟುಹಬ್ಬದ ಶುಭ ಹಾರೈಸಿದರು.

ಜನ್ಮ ದಿನದ ಪ್ರಯುಕ್ತ ಆಡಳಿತ ಮಂಡಳಿ ಸದಸ್ಯರಿಂದ ಹಾಗೂ ಶಿಕ್ಷಕರಿಂದ ಅಧ್ಯಕ್ಷರಿಗೆ ಹಾರಾರ್ಪಣೆ ಮಾಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳು ಅಧ್ಯಕ್ಷರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ನಮ್ಮ ಶಾಲಾ ಸದಸ್ಯರಾದ ಶ್ರೀ ಎಸ್ ಜಿ ಕೃಷ್ಣ ರವರು ಬರೆದ ‘ಸರಳ ಸಜ್ಜನಿಕೆಯ ಹರಿಕಾರ ‘ – ಶ್ರೀ ಶಿಬರ ಜಯರಾಮ ಕೆದಿಲಾಯ ಎಂಬ ಪುಸ್ತಕದ ಬಿಡುಗಡೆ ಮಾಡಲಾಯಿತು.

ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ ಮಾತನಾಡುತ್ತಾ ನನಗಿಂತ ಹತ್ತು ವರ್ಷ ಹಿರಿಯರಾದ ಎಸ್ ಜಿ ಕೃಷ್ಣ ರವರು ನನ್ನ ಜೀವನ ಚರಿತ್ರೆಯನ್ನು ಬರೆದು ಎಲ್ಲರಿಗೂ ಸಿಗುವಂತೆ ಮಾಡಿದ್ದಾರೆ ನನಗೆ ಸಾಧ್ಯವಾಗದನ್ನು ಮಾಡಿದ್ದಾರೆ ಅವರಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ. ಜಯರಾಜ ಆಚಾರ್ಯರು ಪ್ರಕಾಶನ ಮಾಡಿದಕ್ಕೆ ಹಾಗೂ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದವನ್ನು ಸಲ್ಲಿಸಿದರು.


ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ರವರು ಆದರದಿಂದ ಎಲ್ಲರನ್ನು ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಪ್ರಶಾಂತಿ ರವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಗೀತಾ ಎಚ್ ಎಸ್ ರವರು ವಂದಿಸಿದರು. ಕೊನೆಯಲ್ಲಿ ಎಲ್ಲರಿಗೂ ಸಿಹಿ ಭೋಜನದ ವ್ಯವಸ್ಥೆ ಕಲ್ಪಿಸಲಾಯಿತು.

 

Continue Reading
Click to comment

Leave a Reply

Your email address will not be published. Required fields are marked *

Advertisement