Published
8 months agoon
By
Akkare News
ಉಡುಪಿ: ರಾಜ್ಯದ ಅಭಿವೃದ್ಧಿ ಯೋಜನೆಗಳ ಜಾರಿ, ಪರಿಶೀಲನೆ ಮತ್ತು ಅಹವಾಲು ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಜಿಲ್ಲಾಮಟ್ಟದಲ್ಲಿ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಲು ಎಲ್ಲ ಜಿಲ್ಲೆಗಳಿಗೂ ಉಸ್ತುವಾರಿ ಕಾರ್ಯದರ್ಶಿಗಳ ನೇಮಕಾತಿ ಸರಕಾರ ಮಾಡಲಿದೆ.


ಅದರಂತೆ ಉಡುಪಿ ಜಿಲ್ಲೆಗೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರನ್ನು ನೇಮಿಸಿ ಆದೇಶ ಹೊರಪಡಿಸಿದೆ.

ಈ ಹಿಂದೆ ಸತ್ಯವತಿ ಅವರು ಉಸ್ತುವಾರಿ ಕಾರ್ಯದರ್ಶಿಯಾಗಿದ್ದು, ಅವರು ಇತ್ತೀಚೆಗೆ ನಿವೃತ್ತಿ ಹೊಂದಿದ್ದರಿಂದ ಹುದ್ದೆ ತೆರವಾಗಿತ್ತು. ಉಸ್ತುವಾರಿ ಕಾರ್ಯದರ್ಶಿಗಳು ಆಗಿಂದಾಗ್ಗೆ ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸುತ್ತಿರುತ್ತಾರೆ.






