Published
10 months agoon
By
Akkare News
ಪುತ್ತೂರು: ಬಸ್ ಚಲಾಯಿಸುತಿದ್ದಾಗ ಕುಸಿದು ಬಿದ್ದ ಚಾಲಕ, ಅಪಾಯದಿಂದ ಪಾರಾದ ಪ್ರಯಾಣಿಕರು.
ಪುತ್ತೂರು, ಜುಲೈ 08: ಬಸ್ ಚಲಾಯಿಸುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಅಸ್ವಸ್ಥಗೊಂಡು ಸ್ಟಿಯರಿಂಗ್ ಮೇಲೆ ಬಿದ್ದರೂ ತಕ್ಷಣ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.


ಬಸ್ ಚಲಾಯಿಸುತ್ತಿದ್ದಾಗ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಅಸ್ವಸ್ಥಗೊಂಡು ಸ್ಟಿಯರಿಂಗ್ ಮೇಲೆ ಬಿದ್ದರೂ ತಕ್ಷಣ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ ಘಟನೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

ಪುತ್ತೂರಿನಿಂದ ಸುಳ್ಯಕ್ಕೆ ದಯಾನಂದ ಎಂಬುವರು ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.ಬಸ್ ಕಂಬ್ರಕ್ಕೆ ತಲುಪುತ್ತಿದ್ದಂತೆ ದಯಾನಂದ ಅವರು ಅಸ್ವಸ್ಥಗೊಂಡಿದ್ದರು. ಸ್ಥಳೀಯರು ಅವರನ್ನು ಸ್ಥಳೀಯ ಕ್ಲಿನಿಕ್ ಒಂದಕ್ಕೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಔಷಧಿ ನೀಡಿದ್ದರು. ಔಷಧಿ ಸೇವಿಸಿದ ಬಳಿಕ ಚೇತರಿಸಿಕೊಂಡ ಅವರನ್ನು ಮನೆಗೆ ಕಳುಹಿಸಿ ಕೊಡಲಾಯಿತು. ಪ್ರಯಾಣಿಕರನ್ನು ಬದಲಿ ಬಸ್‌ನಲ್ಲಿ ಕಳುಹಿಸಲಾಯಿತು.





