Connect with us

ಇತರ

ಸ್ನೇಹಿತನ ಪರ ಮಾತಾಡಿದ್ದಕ್ಕೆ ಸಿನಿಮಾ ಸ್ಟೈಲ್ನಲ್ಲಿ ಅಟ್ಟಾಡಿಸಿಕೊಂಡು ಯುವಕನೊಬ್ಬನ ಕಾಲು ಕುತ್ತಿಗೆ ಕತ್ತರಿಸಿದ ದುಷ್ಕರ್ಮಿಗಳು..!

Published

on

ಬೆಂಗಳೂರಿನಲ್ಲಿ ಬಾರ್ನಲ್ಲಿ ಸ್ನೇಹಿತರ ಪಾರ್ಟಿಯಲ್ಲಿ ಜಗಳ. ತೇಜಸ್ (24) ಎಂಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್. ಆಟೋ ಡ್ಯೂಟಿ ಮುಗಿಸಿಕೊಂಡು ಚಾಮರಾಜಪೇಟೆಯ ರುದ್ರಪ್ಪ ಗಾರ್ಡನ್ಗೆ ಹೋಗಿದ್ದ ತೇಜಸ್. ಸಂತೋಷ್ ಎಂಬ ಸ್ನೇಹಿತನ ಜೊತೆ ಬಾರ್ನಲ್ಲಿ ಪಾರ್ಟಿ.


ಈ ವೇಳೆ ಬಾರ್ಗೆ ಸಂತೋಷ್ ಸ್ನೇಹಿತರಾದ ರಾಹುಲ್ ಮತ್ತು ಪ್ರಜ್ವಲ್ ಎಂಟ್ರಿ. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಂತೋಷ್ ಹಾಗೂ ರಾಹುಲ್, ಪ್ರಜ್ವಲ್ ಮಧ್ಯೆ ಜಗಳ ಶುರು ಆಗಿತ್ತು. ಜಗಳದ ನಡುವೆ ಸ್ನೇಹಿತನ ಪರ ಮಾತಾಡಿದ್ದ ತೇಜಸ್. ನಂತರ ಇಲ್ಲೇ ಇರು ಅಂತಾ ತೇಜಸ್ ನ ಕೂರಿಸಿ ಹೊರ ಹೋಗಿದ್ದ ಆರೋಪಿಗಳು.

ಇತ್ತ ಆಟೋದಲ್ಲಿ ಮನೆಗೆ ಹೋಗಲು ಮುಂದಾಗಿದ್ದ ತೇಜಸ್ನ ಆಟೋದಿಂದ ಕೆಳಗಿಳಿಸಿ ಮಚ್ಚಿನಿಂದ ಹ*ಲ್ಲೆ ಮಾಡಿ ಕಾಲು ಕಟ ಮಾಡಿದ ಆರೋಪಿಗಳು. ನಂತರ ಕುತ್ತಿಗೆ ಹಿಂಭಾಗ ಕೂಡ ಕೊಚ್ಚಿ ಎಸ್ಕೇಪ್. ತೀವ್ರ ತೇಜಸ್ನ ವಿಕ್ಟೋರಿಯಾಗೆ ದಾಖಲಿಸಿದ್ದ ಸ್ಥಳೀಯರು. ನಂತರ ಕುಟುಂಬಸ್ಥರಿಂದ ಖಾಸಗಿ ಆಸ್ಪತ್ರೆಗೆ ದಾಖಲು. ಚಾಮರಾಜಪೇಟೆ ಪೊಲೀಸರಿಂದ ಆರೋಪಗಳಿಗಾಗಿ ಹುಡುಕಾಟ.



 

 

Continue Reading
Click to comment

Leave a Reply

Your email address will not be published. Required fields are marked *

Advertisement