Connect with us

ಇತರ

ಪುತ್ತೂರಿನ ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ಅವರ ಜನ್ಮದಿನಾಚರಣೆ

Published

on

ಪುತ್ತೂರಿನ ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ಅವರ ಜನ್ಮದಿನಾಚರಣೆಯನ್ನು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸಿಹಿ ತಿಂಡಿ ಹಂಚುವ ಮೂಲಕ ಆಚರಿಸಲಾಯಿತು. ಶಾಸಕರು ಕೇಕ್ ಕಟ್ ಮಾಡಿದರು. ಇದೇ ಸಂದರ್ಭ ಅವರು ಗಾಂಧಿ ಕಟ್ಟೆಗೆ ತೆರಳಿ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭ ಅಶೋಕ್ ರೈ ಬ್ರಿಗೇಡ್‌ನ ಅಧ್ಯಕ್ಷ ಶಶಿಧರ್ ನಾಯ್ಕ ಕೃಷ್ಣನಗರ, ಶರೀಫ್ ಬಲ್ನಾಡು, ರಝಾಕ್ ಬಪ್ಪಳಿಗೆ, ಪ್ರಕಾಶ್ ರೈ, ನವೀನ್ ರೈ ಬನ್ನೂರು, ಗಗನ್‌ ದೀಪ್ ಕರ್ಮಲ, ನೆಬಿಸ ಬಪ್ಪಳಿಗೆ, ಅದ್ದು ಪಡೀಲು, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ ಆಚಾರ್ಯ, ಕಾರ್ಯದರ್ಶಿ ಅಶ್ರಫ್ ಮುಲಾರ್, ರಾಜೇಶ್ ರೈ ಕುರಿಯ ಸಿಹಿ ತಿಂಡಿ ಹಂಚಿದರು. ಬ್ಲಾಕ್

ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ನಿಹಾಲ್ ಶೆಟ್ಟಿ, ರೈ ಎಸ್ಟೇಟ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಕೋಡಿಂಬಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು,ಪುತ್ತೂರು ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಧರ್ಮಪಾಲ್ ಗೌಡ, ಕಾಂಗ್ರೆಸ್ ಮುಖಂಡರಾದ ಮುರಳೀಧರ ರೈ, ಪವಿತ್ರ ರೈ, ಪೂರ್ಣಿಮಾ ರೈ ಸತೀಶ್ ಪುತ್ತೂರು ಹಕೀಮ್ ಬೊಲ್ವಾರ್. ನವೀನ್ ಆಚಾರ್ಯ ಕೃಷ್ಣ ನಗರ. ರವಿಕುಮಾರ್ ಗೌಡ ಪೋಲ್ಯ. ಕೀರ್ತನ್ ಆಚಾರ್ಯ ಹಂಟ್ಯಾರು. ಅಕ್ಷಯ್ ಗೌಡ ಕಾಂಚನ ನಾಮನಿರ್ದೇಶಿತ ಸದಸ್ಯ ಶರೀಫ್ ಬಲ್ನಾಡು, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement