Published
5 months agoon
By
Akkare News
ಪುತ್ತೂರು ನಗರದ ದರ್ಬೆ – ಅಂಕಲ್ ಸ್ವೀಟ್ಸ್ ಪ್ರದೇಶದ ಒಳಚರಂಡಿಗೆ ಸ್ಲ್ಯಾಬ್ ನಿರ್ಮಾಣದ ಬೇಡಿಕೆ ಕಳೆದ 40 ವರ್ಷಗಳಿಂದ ಅನೇಕ ಮನವಿಗಳ ಮೂಲಕ ಮುಂದುವರಿದಿದ್ದರೂ ಸ್ಪಂದನೆ ದೊರೆಯದೆ ನೆನೆಗುದಿಗೆ ಬಿದ್ದಿತ್ತು.
ಈ ದೀರ್ಘಕಾಲದ ಜನ ಬಯಕೆಯನ್ನು ಈಡೇರಿಸುತ್ತಾ, ರೂ.30 ಲಕ್ಷ ಅನುದಾನವನ್ನು ಮಂಜೂರು ಮಾಡಿ ಕಾಮಗಾರಿ ಪೂರ್ಣಗೊಳಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀಮಾನ್ ಅಶೋಕ್ ಕುಮಾರ್ ರೈ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.


ಅಭಿವೃದ್ಧಿಯ ಹರಿಕಾರರೂ, ಬಡವರ ಬಂಧುವೂ ಆಗಿರುವ ಶ್ರೀ ಅಶೋಕ್ ಕುಮಾರ್ ರೈ ಅವರು ಕಳೆದ ಹಲವಾರು ವರ್ಷಗಳಿಂದ ಅನೇಕ ಬಡ ಕುಟುಂಬಗಳ ಕಣ್ಣೀರೊರೆಸಿ, ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.ಇದೀಗ ಕಳೆದ ಎರಡುವರೆ ವರ್ಷಗಳಿಂದ ನಮ್ಮ ಪುತ್ತೂರಿನ ಶಾಸಕರಾಗಿ ಅವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸುತ್ತಾ, ಪುತ್ತೂರಿಗೆ ಮೆಡಿಕಲ್ ಕಾಲೇಜು ಸೇರಿದಂತೆ ಹಲವಾರು ಜನೋಪಯೋಗಿ ಯೋಜನೆಗಳನ್ನು ತಂದು ಜನಮನ ಗೆದ್ದಿದ್ದಾರೆ.
ಜನಹಿತಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಈ ಮಾದರಿ ಜನನಾಯಕರಿಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು.
– ಫಲಾನುಭವಿಗಳು ಹಾಗೂ ನಾಗರಿಕರು ದರ್ಬೆ,ಪುತ್ತೂರು





