Published
4 months agoon
By
Akkare News
ಪುತ್ತೂರು: ಯಾವುದೇ ಚುನಾವಣೆ ಇರಲಿ ಆ ಸಂದರ್ಭದಲ್ಲಿ ಒಂದಷ್ಟು ಸ್ನೇಹಿತರು,ಮತ್ತೊಂದಿಷ್ಟು ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಅದರಲ್ಲೂ ತನ್ನ ಗ್ರಾಮದವರೇ ನಮಗೆ ವಿರುದ್ದವಾದರೆ, ನಮ್ಮ ವಿರೋಧಿಗಳ ಅಥವಾ ಎದುರಾಳಿಗಳ ಜೊತೆ ಕಾಣಿಸಿಕೊಂಡರೆ ಆತನ ಬಗ್ಗೆ ಅಸಹ್ಯ ಭಾವನೆ ಮೂಡುತ್ತದೆ.ಇದು ಎಲ್ಲಿಯವರೆಗೆ ಅಂದ್ರೆ ನಾನು ವೋಟಿನಲ್ಲಿ ಗೆದ್ದರೆ ನಿನಗೆ ಬುದ್ದಿ ಕಲಿಸುವೆ ಎನ್ನುವ ಹಂತಕ್ಕೂ ತಲುಪುತ್ತದೆ. ಇಂಥಹದೊಂದು ಘಟನೆ ಕೋಡಿಂಬಾಡಿ ಗ್ರಾಮದಲ್ಲಿ ನಡೆದಿತ್ತು .


ಪುತ್ತೂರು ಉಪ್ಪಿನಂಗಡಿ ರಸ್ತೆಯ ಸೇಡಿಯಾಪು ಬಳಿ ರಸ್ತೆ ಮಾರ್ಜಿನ್ ನಲ್ಲಿ ಅಂಗಡಿ ಮಾಡಿ ವ್ಯಾಪಾರ ಮಾಡುತ್ತಿದ್ದವರು ಸ್ಥಳೀಯ ನಿವಾಸಿ ಸುಧಾಕರ್. ಸುಧಾಕರ್ ಅವರು ಕಳೆದ ಬಾರಿ ಗ್ರಾಪಂ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ದವಾಗಿ ಕೆಲಸ ಮಾಡಿದ್ದರು. ಚುನಾವಣೆಯಲ್ಲಿ ಕೋಡಿಂಬಾಡಿ ಪಂಚಾಯತ್ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ ಬಂತು, ಕಾಂಗ್ರೆಸ್ ಶಾಸಕರೂ ಗೆದ್ದು ಬಂದಿದ್ದಾರೆ.
ಸುಧಾಕರ ಅವರ ಅಂಗಡಿ ರಸ್ತೆ ಮಾರ್ಜಿನ್ ನಲ್ಲಿರುವ ಕಾರಣ ಅವರ ಅನಧಿಕೃತ ಅಂಗಡಿಯನ್ನು ತೆರವು ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯಿಂದ ಸೂಚನೆ ಬಂದಿದೆ. ಗ್ರಾಪಂ ಈ ಬಗ್ಗೆ ಸುಧಾಕರ್ ಅವರಿಗೆ ಅಂಗಡಿ ತೆರವು ಮಾಡುವಂತೆ ಸೂಚನೆ ನೀಡಿತ್ತು. ತನ್ನ ಆದಾಯದ ಏಕೈಕ ಮೂಲವಾಗಿದ್ದ ಅಂಗಡಿ ತೆರವಾಗುತ್ತಿರುವ ಬಗ್ಗೆ ಸುಧಾಕರ ಆತಂಕದಲ್ಲಿದ್ದರು. ಚುನಾವಣೆ ಸಮಯದಲ್ಲಿ ತಾನು ವಿರೋದ ವಾಗಿ ಕೆಲಸ ಮಾಡಿದ್ದರಿಂದ ಏನು ಮಾಡುವುದು ಎಂದು ತೊಳಲಾಟದಲ್ಲಿದ್ದರು. ಗ್ರಾಪಂ ಗೆ ಬದಲಿ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡರು. ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್ ಅವರಲ್ಲಿ ಯೂ ಸುದಾಕರ್ ಅವರು ಮನವಿ ಮಾಡಿಕೊಂಡಿದ್ದರು. ಈ ವಿಚಾರವನ್ನು ಜಯಪ್ರಕಾಶ್ ಬದಿನಾರ್ ರವರು ಶಾಸಕ ಅಶೋಕ್ ರೈ ಗಮನಕ್ಕೆ ತಂದಾಗ ಅಂಗಡಿ ತೆರವು ಆಗಿತ್ತಿರುವುದು ನನಗೆ ಗೊತ್ತಾಗಿದೆ, ಅಂಗಡಿ ಮಾಲಕ ನಮ್ಮ ವಿರುದ್ದ ಕೆಲಸ ಮಾಡಿದವರೆಂಬುದೂ ಗೊತ್ತಿದೆ ಆದರೆ ಅವರಿಗೆ ತೊಂದರೆ ಕೊಡುವ ಕೆಲಸಕ್ಕೆ ಹೋಗಬೇಡಿ, ಅವರಿಗೆ ಬದಲಿ ವ್ಯವಸ್ಥೆ ಮಾಡಿ ಎಂದು ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್ ಗೆ ಶಾಸಕರು ಸೂಚನೆ ನೀಡಿದರು.ಶಾಸಕರ ಸೂಚನೆಯಂತೆ ಕೋಡಿಂಬಾಡಿ ಗ್ರಾಪಂ ವತಿಯಿಂದ ಕೊಠಡಿಯೊಂದನ್ನು ಕಟ್ಟಲು ವ್ಯವಸ್ಥೆ ಮಾಡಲಾಗಿದೆ.ಶಾಸಕರ ಮಾನವೀಯತೆಗೆ ಸ್ಥಳೀಯರಿಂದ ಮೆಚ್ಷುಗೆ ವ್ಯಕ್ತವಾಗಿದೆ.

ನಾವು ಕಾಂಗ್ರೆಸ್ಸಿಗರು, ಅನ್ಯಾಯ ಮಾಡುವುದು ನಮ್ಮ ಧರ್ಮವಲ್ಲ, ಚುನಾವಣರ ಸಮಯದಲ್ಲಿ ನಮ್ಮ ವಿರುದ್ದವಾಗಿ ಕೆಲಸ ಮಾಡಿದ್ದರು, ಅವರ ಅಂಗಡಿಯನ್ನು ತೆರವು ಮಾಡುವ ಪೂರ್ಣ ಅಧಿಕಾರ ನಮ್ಮಲ್ಲಿತ್ತು ಆದರೆ ನಾವು ಹಾಗೆ ಮಾಡಲಿಲ್ಲ. ಶಾಸಕ ಅಶೋಕ್ ರೈ ಸೂಚನೆಯಂತೆ ಬದಲಿ ವ್ಯವಸ್ಥೆ ಮಾಡಿದ್ದೇವೆ ಇದಕ್ಕೆ ಅಂಗಡಿಮಾಲಕರು ಕೃತಜ್ಞರಾಗಿರಬೇಕು
ಜಯಪ್ರಕಾಶ್ ಬದಿನಾರ್
ಗ್ರಾಪಂ ಉಪಾಧ್ಯಕ್ಷರು,ಕೋಡಿಂಬಾಡಿ







