Published
2 months agoon
By
Akkare News

ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಮತದಾರ ಪಟ್ಟಿ ಪರಿಷ್ಕರಣೆಯ ಕುರಿತು ಬಿಎಲ್‌ಎಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮ್ಯಾಪಿಂಗ್ ಬಗ್ಗೆ ಈಗಾಗಲೇ ಕೆಲವೊಂದು ಆಕ್ಷೇಪಾರ್ಹ ದೂರುಗಳು ಬಂದಿದೆ. ವಿದೇಶದಲ್ಲಿರುವ ಅಥವಾ ಕ್ಷೇತ್ರ ಬಿಟ್ಟು ಹೊರಗಡೆ ನೆಲೆಸಿರುವ ಕುಟುಂಬಗಳ ವೋಟು ಡಿಲಿಟ್ ಮಾಡುವ ಸಾಧ್ಯತೆ ಇದೆ. ಕಾರ್ಯಕರ್ತರು, ಬಿಎಲ್‌ಎಗಳು ಈಬಗ್ಗೆ ಅಧಿಕಾರಿಗಳಿಗೆ ಸೂಕ್ತ ದಾಖಲೆ, ಮಾಹಿತಿ ನೀಡುವ ಮೂಲಕ ಮತದಾರ ಪಟ್ಟಿಯಿಂದ ಹೆಸರು ಅಳಿಸದಂತೆ ನೋಡಿಕೊಳ್ಳಬೇಕು. ನನ್ನದು ಸರಿ ಇದೆ ಎಂದು ಕೈಕಟ್ಟಿ ಕೂರಬೇಡಿ. ನಾಡಿದ್ದು ವೋಟು ಹಾಕ್ಲಿಕ್ಕೆ ಹೋಗುವಾಗ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಆ ವೇಳೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಕರ್ನಾಟಕದಲ್ಲಿ ಎಸ್‌ಐಆರ್ ಗೆ ಅಧಿಕೃತ ಆದೇಶ ಬಂದ ಬಳಿಕ ಆನ್‌ಲೈನ್ ಮೂಲಕವೂ ನಿಮ್ಮ ಹೆಸರು ಮತದಾರ ಪಟ್ಟಿಯಲ್ಲಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು ಎಂದು ಶಾಸಕರು ಹೇಳಿದರು. ಮತದಾರ ಪಟ್ಟಿಯಿಂದ ಹೆಸರು ಅಳಿಸುವ ಅಧಿಕಾರ ಯಾರಿಗೂ ಇಲ್ಲ ಎಂಬುದನ್ನೂ ಶಾಸಕರು ವಿವರಿಸಿದರು. ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.










