Published
5 hours agoon
By
Akkare News
ಪುತ್ತೂರು: ನೆಹರೂನಗರದ ಪಟ್ಲ ಪ್ಲಾನೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೀವಾ ಮೆಡಿಕಲ್ಸ್‌ನ ಸಹ ಸಂಸ್ಥೆ ಜೀವ ಡಯಾನ್ನೊಸ್ಟಿಕ್ ಲ್ಯಾಬೋರೇಟರಿ ನೆಹರೂನಗರದ ಹೋಟೆಲ್ ಕೃಷ್ಣ
ಭವನದ ಬಳಿಯ ಪಟ್ಲ ಕಾಂಪ್ಲೆಕ್ಸ್‌ನಲ್ಲಿ ಮಾ.15 ರಂದು ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ.

ತಾಲೂಕು ಆರೋಗ್ಯಾಧಿಕಾರಿ |ಡಾ. ದೀಪಕ್ ರೈ ಮತ್ತು ಮಹಾವೀರ ಮೆಡಿಕಲ್ ಸೆಂಟರ್‌ನ ವೈದ್ಯಕೀಯ ತಜ್ಞರಾಗಿರುವ ಡಾ|ಸುರೇಶ್ ಪುತ್ತೂರಾಯ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ಎಲ್ಲಾ ತರದ ಬ್ಲಡ್ ಟೆಸ್ಟ್,ಯೂರಿನ್ ಟೆಸ್ಟ್‌ಗಳನ್ನು ಅನುಭವಸ್ಥ ಲ್ಯಾಬ್ ಟೆಕ್ನಿಷಿಯನ್‌ಗಳು ಸಂಪೂರ್ಣ ಸ್ವಯಂ ಚಾಲಿತ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಉಪಕರಣಗಳಿಂದ ಮಾಡುವುದರಿಂದ ನಿಖರವಾದ ಫಲಿತಾಂಶಗಳು ಕ್ಲಪ್ತ ಸಮಯದಲ್ಲಿ ನಮ್ಮಲ್ಲಿ ದೊರೆಯುತ್ತದೆ ಗ್ರಾಹಕರು ಇದರ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಮಾಲಕರಾದ ರವಿಸಂಪತ್ ನ್ಯಾಕ್ ತಿಳಿಸಿದ್ದಾರೆ.








