Published
3 weeks agoon
By
Akkare News
ಗ್ಯಾಸ್ ಬೆಲೆ ಏರಿಕೆಯಿಂದ ಆಟೋದರ ಏರಿಕೆ ಅನಿವಾರ್ಯ : ಜಯರಾಮ್ ಕುಲಾಲ್
ಪುತ್ತೂರು ಎ.04:ಪುತ್ತೂರು ತಾಲೂಕು ಆಟೋ ಚಾಲಕ-ಮಾಲಕರ ಸಂಯುಕ್ತ ಹೋರಾಟ ಸಮಿತಿ ಪುತ್ತೂರು, ದ. ಕ ಮಾನ್ಯ ಜಿಲ್ಲಾಧಿಕಾರಿಗಳು, ಹಾಗೂ ಅಧ್ಯಕ್ಷರು, ಜಿಲ್ಲಾ ಸಾರಿಗೆ ಪ್ರಾಧಿಕಾರ ಮಂಗಳೂರು, ದ. ಕ. ಜಿಲ್ಲೆ.
ಮಾನ್ಯ ಸಹಾಯಕ ಆಯುಕ್ತರು, ಪುತ್ತೂರು
ವಿಷಯ: ಎಲ್ಪಿಜಿ ಅಟೋ ಗ್ಯಾಸ್ ಬೆಲೆ ಏರಿಕೆಯಿಂದ ರಿಕ್ಷಾ ಚಾಲಕರಿಗೆ ತೊಂದರೆಯಾಗಿರುವ ಬಗ್ಗೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಯುದ್ಧಗಳು ನಡೆಯುತ್ತಿರುವ ಪರಿಣಾಮವಾಗಿ ಎಲ್ಪಿಜಿ ಅಟೋ ಗ್ಯಾಸ್ಗಳಲ್ಲಿ ಏರಿಕೆ ಆಗುತ್ತಿರುವುದರಿಂದ ಅಟೋ ಚಾಲಕರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಅಲ್ಲದೆ ಎಲ್ಪಿಜಿ ಹಾಗೂ ಇತರ ಪಂಪ್ಗಳಲ್ಲಿ ನಿರಂತರವಾಗಿ ದರ ಹೆಚ್ಚಳ ಮಾಡುತ್ತಿರುವುದಲ್ಲದೇ ಬೇರೆ ಬೇರೆ ಪಂಪ್ಗಳಲ್ಲಿ ಬೇರೆ ಬೇರೆ ರೀತಿಯ ದರಗಳನ್ನು ಅಟೋ ಚಾಲಕರಲ್ಲಿ ಪಡೆಯುತ್ತಿದ್ದಾರೆ. ಅಲ್ಲದೇ ಹೋಟೆಲ್ಗಳಲ್ಲಿ ಯಾವುದೇ ಮುಲಾಜಿಲ್ಲದೇ ದರ ಏರಿಕೆಯನ್ನು ಮಾಡಿದ್ದಾರೆ. ಇದರಿಂದಾಗಿ ರಿಕ್ಷಾ ಚಾಲಕರ ಬದುಕು ಸಂಕಷ್ಟಕ್ಕೆ ಈಡಾಗಿದೆ. ಆದುದರಿಂದ ಈ ಕೆಳಗಿನ ನಮ್ಮ ಬೇಡಿಕೆಯನ್ನು ಈಡೇರಿಸ ಬೇಕಾಗಿ ವಿನಂತಿಸುತ್ತೇವೆ.

1) ಎಲ್ಲಾ ಎಲ್.ಪಿ.ಜಿ. ಹಾಗೂ ಇತರ ಎಲ್ಲಾ ಅಟೋ ಗ್ಯಾಸ್ ಪಂಪುಗಳಲ್ಲಿ ಏಕರೂಪ ದರ ನಿಗದಿಪಡಿಸುವುದು.
2) ಎಲ್ಲಾ ಪಂಪ್ಗಳಲ್ಲಿ ಸರ್ಕಾರ ನಿಗದಿಪಡಿಸಿದ ಎಲ್ಲಾ ಅಟೋ ಗ್ಯಾಸ್ ದರ ಫಲಕವನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳುವುದು.
3) ಪ್ರತೀ ರಿಕ್ಷಾ ಚಾಲಕನಿಗೆ ದಿನಕ್ಕೆ ಕನಿಷ್ಠ 5 ಕೆ. ಜಿ. ಅಟೋ ಗ್ಯಾಸ್ ನೀಡಲು ಕ್ರಮ ಕೈಗೊಳ್ಳಬೇಕು.4) ಪ್ರಸ್ತುತ ಈಗಾಗಲೇ ನೀಡಲಾಗಿರುವ ಹಳೆ ಎಲ್ಪಿಜಿ ಅಟೋ ರಿಕ್ಷಾಗಳಿಗೆ ಪೆಟ್ರೋಲ್ ಹಾಕಿ ಚಾಲನೆಗೊಳಿಸಲು ಸಾಧ್ಯವಾಗುವುದಿಲ್ಲ. ಇದನ್ನು ಸರಿಪಡಿಸಲು ಚಾಲಕರಿಗೆ ಸಾವಿರಾರು ರೂಪಾಯಿ ಖರ್ಚು ತಗಲುತ್ತದೆ. ಇದಕ್ಕೆ ಸರ್ಕಾರ ಸೂಕ್ತ ಪರಿಹಾರ ವನ್ನು ನೀಡಬೇಕು.
5) ದಕ್ಷಿಣಕನ್ನಡ ಜಿಲ್ಲೆಯ ಕೆಲವು ತಾಲೂಕಿಗೆ ವಾಯುಮಾಲಿನ್ಯವಾಗುತ್ತಿದೆಯೆಂದು ಹೇಳಿ ಪೆಟ್ರೋಲ್ ಮತ್ತು ಡಿಸೀಲ್ ಅಟೋ ರಿಕ್ಷಾಗಳನ್ನು ನಿರ್ಬಂಧಿಸಲಾಗಿದ್ದು ಇದರಿಂದಾಗಿ ಪ್ರಸ್ತುತ ರಿಕ್ಷಾ ಚಾಲಕರು ಸಂಕಷ್ಟಕ್ಕೆ ಈಡಾಗಿದ್ದಾರೆ. ಆದುದರಿಂದ ಈಗಿರುವ ನಿರ್ಬಂಧವನ್ನು ತೆರವುಗೊಳಿಸಬೇಕು.
6) ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋಟೆಲ್ಗಳಲ್ಲಿ ದರ ಹೆಚ್ಚಳ ಮಾಡಿದಂತೆ ನಾವುಗಳು ಗ್ಯಾಸ್ ದರಕ್ಕೆ ಅನುಗುಣವಾಗಿ ಬಾಡಿಗೆ. ದರವನ್ನು ಹೆಚ್ಚಳಗೊಳಿಸಬೇಕಾಗುತ್ತದೆ.
7) ಸರಕಾರ ತೆರಿಗೆಯನ್ನು ಕಡಿಮೆ ಮಾಡಿ ಗ್ಯಾಸ್ನ್ನು ಹಿಂದಿನ ದರದಲ್ಲಿ ಸಿಗುವಂತೆ ಮಾಡಬೇಕು. ಇಲ್ಲದಿದ್ದಲ್ಲಿ ರಿಕ್ಷಾದ ಬಾಡಿಗೆ ದರವನ್ನು ಕೂಡಲೇ ಹೆಚ್ಚಳಗೊಳಿಸಲು ತಾವು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ. ತೀರ್ಮಾನ ಕೈಗೊಳ್ಳಲಾಗುವುದು.
8) ನಮ್ಮ ಈ ನ್ಯಾಯಯುತ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕೆಂದು ವಿನಂತಿಸುತ್ತೇವೆ.





