Published
1 week agoon
By
Akkare News
ಬಲ್ನಾಡು : ಇಲ್ಲಿನ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಭಕ್ತರ ದಾನಸಹಾಯದೊಂದಿಗೆ ಸಂಪೂರ್ಣ ಶಿಲಾಮಯ ದಾರಂದವನ್ನು ಅಳವಡಿಸಲಾಗುತ್ತಿದೆ. ಮೊದಲು ಮರದಿಂದ ನಿರ್ಮಿಸಲಾಗಿದ್ದ ದಾರಂದವನ್ನು ಇದೀಗ ಕಲ್ಲಿನಿಂದ ನಿರ್ಮಿಸಿ ಶಾಶ್ವತ ರೂಪ ನೀಡಲಾಗುತ್ತಿದೆ. ದಾನಿಗಳ ಸಹಕಾರದಿಂದ ನಡೆಯುತ್ತಿರುವ ಈ ಕಾರ್ಯ ಗಮನ ಸೆಳೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿರುವ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನವು ಪ್ರಮುಖ ಮತ್ತು ಇತಿಹಾಸ ಪ್ರಸಿದ್ಧ ದೈವಸ್ಥಾನಗಳಲ್ಲಿ ಒಂದಾಗಿದೆ. ಇಲ್ಲಿ ದಂಡನಾಯಕ ಮತ್ತು ಉಳ್ಳಾಲ್ತಿ ದೈವಗಳ ಆರಾಧನೆ ನಡೆಯುತ್ತದೆ. ತುಳುನಾಡಿನಲ್ಲಿ ಮಾಣಿ, ಅನಂತಾಡಿ, ಬಲ್ನಾಡು, ಕೆಳಿಂಜ ಮತ್ತು ಕೇಪು – ಹೀಗೆ ಒಟ್ಟು ಐದು ಪ್ರಮುಖ ಉಳ್ಳಾಲ್ತಿ ದೈವಸ್ಥಾನಗಳಿವೆ. ಬಲ್ನಾಡು ದೈವಸ್ಥಾನವು ಪ್ರಾಚೀನ ಕಾಲದಿಂದಲೂ ತನ್ನದೇ ಆದ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿದೆ. ಇಲ್ಲಿನ ಆರಾಧನಾ ಪದ್ಧತಿಗಳು ಮತ್ತು ನೇಮೋತ್ಸವಗಳು ಹಲವು ಶತಮಾನಗಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿವೆ.







