Published
4 days agoon
By
Akkare News
ಅಂಬುಲ::ಏ.22-23ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಇವರ ನೇತೃತ್ವದಲ್ಲಿ ಅಂಬುಲ ತರವಾಡಿನ ಶ್ರೀ ವೆಂಕಟ್ರಮಣ ದೇವರ ಮತ್ತು ಶ್ರೀ ನಾಗದೇವರ ಪೂಜೆ ಹಾಗೂ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಸಹಪರಿವಾರ ದೈವಗಳ ನೇಮೋತ್ಸವ ದಿನಾಂಕ : 22-04-2026ನೇ ಬುಧವಾರ ಬೆಳಗ್ಗೆ ಗಂಟೆ 6:00ಕ್ಕೆ ಶ್ರೀ ಗಣಪತಿ ಹೋಮ, ಬೆಳಗ್ಗೆ ಗಂಟೆ 10:00ಕ್ಕೆ ನಾಗತಂಬಿಲ, ಬೆಳಗ್ಗೆ ಗಂಟೆ 11:30ಕ್ಕೆ ಮುಡಿಪು ಕಾಣಿಕೆ, ಶ್ರೀ ಸತ್ಯನಾರಾಯಣ ಪೂಜೆ ನಂತರ ಅನ್ನಸಂತರ್ಪಣೆ, ಸಂಜೆ ಗಂಟೆ 4:00ಕ್ಕೆ ದೈವಗಳ ಭಂಡಾರ ತೆಗೆಯುವುದು, ಸಂಜೆ ಗಂಟೆ 6:30ಕ್ಕೆ ಕುಕ್ಕೆತ್ತಿ ಬಲ್ಲು ಹಾಗೂ ಜಾವತೆ ದೈವದ ನೇಮ ಆರಂಭ, ರಾತ್ರಿ ಗಂಟೆ 8:00ಕ್ಕೆ ಕೊರತ್ತಿ ಮತ್ತು ಕಲ್ಲುರ್ಟಿ ದೈವಗಳ ನೇಮ, ರಾತ್ರಿ ಗಂಟೆ 8:30ಕ್ಕೆ ಅನ್ನಸಂತರ್ಪಣೆ , ರಾತ್ರಿ ಗಂಟೆ 11:00ಕ್ಕೆ ವರ್ಣಾರ ಪಂಜುರ್ಲಿ ಹಾಗೂ ಕುಪ್ಪೆ ಪಂಜುರ್ಲಿ ದೈವದ ನೇಮ ರಾತ್ರಿ ಗಂಟೆ 1:00ಕ್ಕೆ ಪಿಲಿಚಾಮುಂಡಿ ದೈವದ ನೇಮ ಜರುಗಲಿದೆ.

ದಿನಾಂಕ : 23-04-2026ನೇ ಗುರುವಾರ ಬೆಳಗ್ಗೆ ಗಂಟೆ 6:00ಕ್ಕೆ ಧರ್ಮದೈವ ಶ್ರೀ ರುದ್ರಚಾಮುಂಡಿ ದೈವದ ನೇಮೋತ್ಸವ ಪ್ರಾರಂಭ, ಮಧ್ಯಾಹ್ನ ಗಂಟೆ 12:30ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ ಗಂಟೆ 1:00ಕ್ಕೆ ಗುಳಿಗ ದೈವದ ನೇಮ ನಡೆಯಲಿದೆ.ಶ್ರೀ ಕುಲದೇವತಾ ಪ್ರಸನ್ನಾ। ॥ ಶ್ರೀ ಬಾಲಸುಬ್ರಹ್ಮಣ್ಯ ಪ್ರಸನ್ನಃ ॥ಗಂಟೆ: 11.03.2026 ಆತ್ಮೀಯ ಭಗವದ್ಭಕ್ತರೇ ಸ್ವಸ್ತಿ। ಶ್ರೀ ಪರಾಭವ ನಾಮ ಸಂವತ್ಸರದ ಉತ್ತರಾಯಣ ಮೇಷ ಮಾಸ ೮ ಸಲುವ ದಿನಾಂಕ 22-04-2026ನೇ ಬುಧವಾರ ಮತ್ತು ದಿನಾಂಕ 23-04-2026ನೇ ಗುರುವಾರದಂದು ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಇವರ ನೇತೃತ್ವದಲ್ಲಿ ನಮ್ಮ ಅಂಬುಲ ತರವಾಡಿನ
ಶ್ರೀ ವೆಂಕಟ್ರಮಣ ದೇವರ ಮತ್ತು ಶ್ರೀ ನಾಗದೇವರ ಪೂಜೆ ಹಾಗೂ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಸಹಪರಿವಾರ ದೈವಗಳ ನೇಮೋತ್ಸವ ಮಾಡುವುದೆಂದು ಗುರುಹಿರಿಯರಿದ್ದು ನಿಶ್ಚಯಿಸಿರುತ್ತೇವೆ.

ಆ ಪ್ರಯುಕ್ತ ಭಗವದ್ಭಕ್ತರಾದ ತಾವೆಲ್ಲರೂ ಸಹಕುಟುಂಬಿಕರಾಗಿ ಬಂದು ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಮತ್ತು ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ವಿನಂತಿಮಾಡಿಕೊಳ್ಳುವ
ತರವಾಡು ಕುಟುಂಬಸ್ಥರು
ಪ್ರದೀಪ್ ಆರ್. ಗೌಡ ಅರುವ ಗುತ್ತು
ಗೌರವಾಧ್ಯಕ್ಷರು ಕುಟುಂಬದ ಹಿರಿಯರು
ಶಿವಪ್ಪ ಗೌಡ ಅಂಬುಲ
ಶೇಖರ ಗೌಡ ಅಂಬುಲ ಆದಿಮನೆ
ಅಧ್ಯಕ್ಷರು/ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಜೀರ್ಣೋದ್ಧಾರ ಸಮಿತಿ





