Connect with us

ಇತರ

ಉಪ್ಪಿನಂಗಡಿ : ಪೊಲೀಸರನ್ನು ಬಿಡದ ಕಳ್ಳರು ಪೊಲೀಸ್ ಮನೆಗೆ ಕನ್ನ ಹಾಕಿದ… ಕಳ್ಳ…!!! ನಗ ನಗದು ಕಳವು..!!!

Published

on

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಪದ್ಮುಂಜದ ಗಾಡಕೋಡಿ ಎಂಬಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ ಹೆಡ್‌ಕಾನ್ಸ್ಟೇಬಲ್‌ರೋರ್ವರ ಮನೆಗೆ ಕಳ್ಳರು ನುಗ್ಗಿ ಸುಮಾರು 15.80 ಲಕ್ಷ ರೂ. ಮೌಲ್ಯದ ನಗ-ನಗದನ್ನು ಕಳವುಗೈದ ಘಟನೆ ಮೇ 15ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.
 
ಹಾಸನ ಜಿಲ್ಲೆಯ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಗುಪ್ತವಾರ್ತೆ ಸಂಗ್ರಹದ ಕಾರ್ಯನಿರ್ವಹಿಸುತ್ತಿರುವ ಕರುಣಕಾರ ಗೌಡ ಪದ್ಮುಂಜ ಎಂಬವರ ಮನೆಯಲ್ಲಿ ಕಳ್ಳತನ‌ ನಡೆದಿದೆ ಎಂದು ತಿಳಿದು ಬಂದಿದೆ.
 
 

ಕರುಣಾಕರ ಗೌಡರು ಗ್ರಾಮದ ತನ್ನ ಮೂಲ ಮನೆಯಲ್ಲಿ ಒಬ್ಬರೇ ಇದ್ದು, ಪತ್ನಿ ಉದ್ಯೋಗ ನಿಮಿತ್ತ ಬೇರೆ ಊರಿನಲ್ಲಿರುವುದರಿಂದ ಮಕ್ಕಳು ಅವರ ಜೊತೆಗಿದ್ದಾರೆ. ಮನೆಯಲ್ಲಿ ಪತ್ನಿ ತನ್ನ ಕೊಠಡಿಯಲ್ಲಿ ಚಿನ್ನಾಭರಣವನ್ನು ಕಪಾಟಿನಲ್ಲಿರಿಸಿ ಅದಕ್ಕೆ ಬೀಗ ಹಾಕಿ ಬೀಗದ ಕೀಯನ್ನು ತನ್ನೊಂದಿಗೆ ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ರಾತ್ರಿ ಮನೆಯಲ್ಲಿ ಒಂಟಿಯಾಗಿದ್ದ ಕರುಣಾಕರ ಗೌಡ ರವರು ಐಪಿಎಲ್ ಪಂದ್ಯಾಟವನ್ನು ವೀಕ್ಷಿಸಿ ಮಲಗಿದ್ದವರು ಬೆಳಗ್ಗೆ ಎದ್ದಾಗ ಪತ್ನಿಯ ಕೋಣೆಯ ಬೀಗ ಒಡೆದಿರುವುದು ಕಂಡು ಬಂದಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement