Published
16 hours agoon
By
Akkare News
ಪುತ್ತೂರು :ಸಹಕಾರಿ, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದ ಧುರೀಣ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಮತ್ತು ಕಸ್ತೂರಿ ಕಲಾ ಎಸ್.ರೈ ಅವರ ವಿವಾಹದ 50ನೇ ವಾರ್ಷಿಕೋತ್ಸವ ಸಂಭ್ರಮ ‘ಸೀತಾ ಕಸ್ತೂರಿ ಕಲ್ಯಾಣ-50ರ ಸಂಭ್ರಮ’ ಮೇ.23ರಂದು ಸಂಜೆ 5.30ಕ್ಕೆ ಸವಣೂರಿನ ರಶ್ಮಿ ನಿವಾಸದಲ್ಲಿ ನಡೆಯಲಿದೆ.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಅಶೋಕ್ಕುಮಾರ್ ರೈ ಮತ್ತು ಭಾಗೀರಥಿ ಮುರುಳ್ಯ ಭಾಗವಹಿಸಲಿದ್ದು ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕಾವ್ಯ ಶೆಟ್ಟಿ ಅಭಿನಂದನಾ ನುಡಿಗಳನ್ನಾಡುವರು. ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ, ಕಂಬಳ ತೀರ್ಪುಗಾರ ಎಡ್ತೂರು ರಾಜೀವ ಶೆಟ್ಟಿ, ಕನ್ನಡ ಚಲನಚಿತ್ರ ನಿರ್ಮಾಪಕ ರವಿ ಶೆಟ್ಟಿ ಕಳಸ ಅವರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಜೆ 3ರಿಂದ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ‘ಸಂಗೀತ ಗಾನ ಸಂಭ್ರಮ’ ಇರಲಿದೆ ಎಂದು ರಶ್ಮಿ ಎ.ಶೆಟ್ಟಿ, ಅಶ್ವಿನ್ ಎಲ್.ಶೆಟ್ಟಿ, ಪಲ್ಲವಿ ಎಂ.ರೈ, ಮಹೇಶ್ ರೈ ಸವಣೂರು, ಅಶ್ವಿತಾ ಆರ್.ರೈ, ಡಾ.ರಾಜೇಶ್ ರೈ ಸವಣೂರು, ಇಶಾನ್ ರೈ, ಅಥರ್ವ ಶೆಟ್ಟಿ ಸವಣೂರು, ಅವಿ ಶೆಟ್ಟಿ ಸವಣೂರು ತಿಳಿಸಿದ್ದು ಉಡುಗೊರೆಗಿಂತ ಪ್ರೀತಿಯೇ ಮುಖ್ಯ. ಆದ್ದರಿಂದ ಹೂ, ಹಾರ ತರುವ ಬದಲು ಪ್ರೀತಿಯ ಹಾರೈಕೆಯೊಂದಿಗೆ ಬರುವಂತೆ ಕೋರಿದ್ದಾರೆ.



