Published
11 hours agoon
By
Akkare News
ಮಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 9 ಮಂದಿ ಮಹಿಳಾ ಸಿಬ್ಬಂದಿಯನ್ನು ಗುತ್ತಿಗೆ ಅವಧಿ ಮುಕ್ತಾಯಗೊಂಡ ಕಾರಣ ಕೆಲಸದಿಂದ ವಜಾಗೊಳಿಸಲಾಗಿತ್ತು. ಏಕಾಏಕಿ ಉದ್ಯೋಗ ಕಳೆದುಕೊಂಡ ಕಾರಣ ಅವರ ಕುಟುಂಬಗಳ ಜೀವನೋಪಾಯದ ಮೇಲೆ ಸಂಕಷ್ಟ ಎದುರಾಗಿತ್ತು. ಈ ಸಂದರ್ಭದಲ್ಲಿ ದಿಕ್ಕುತೋಚದ ಸ್ಥಿತಿಯಲ್ಲಿದ್ದ ಮಹಿಳಾ ಸಿಬ್ಬಂದಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ವಿವರಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡರು. ಬಡವರು ಮತ್ತು ಶ್ರಮಿಕ ವರ್ಗದ ಜನರ ಪರ ಸದಾ ಕಾಳಜಿ ಹೊಂದಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯದ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರು. ಯಾವುದೇ ಕಾರಣಕ್ಕೂ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಯನ್ನು ಅನ್ಯಾಯವಾಗಿ ಕೆಲಸದಿಂದ ದೂರ ಮಾಡಬಾರದು ಹಾಗೂ ಅವರ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವಂತೆ ಸೂಚಿಸಿದರು.
ಶಾಸಕರ ತ್ವರಿತ ಮಧ್ಯಸ್ಥಿಕೆ ಮತ್ತು ಮಾನವೀಯ ಕಾಳಜಿಯ ಫಲವಾಗಿ, ವಜಾಗೊಂಡಿದ್ದ ಎಲ್ಲಾ 9 ಮಂದಿ ಮಹಿಳಾ ಸಿಬ್ಬಂದಿಗೂ ಮತ್ತೆ ಉದ್ಯೋಗ ದೊರೆತಿದೆ. ಇದರಿಂದ ಅವರ ಕುಟುಂಬಗಳಲ್ಲಿ ಸಂತಸ ಮೂಡಿದ್ದು, ಜೀವನೋಪಾಯದ ಭದ್ರತೆ ಮರುಸ್ಥಾಪನೆಯಾಗಿದೆ.





