Connect with us

ಇತರ

ಬೆಳಗಿನ ಹಾಗೂ ರಾತ್ರಿ ಸಮಯದ, ಪುತ್ತೂರು ಸಾಲ್ಮರ ಎಪಿಎಂಸಿ ರೈಲ್ವೆ ಅಂಡರ್ ಬ್ರಿಜ್ ರಸ್ತೆಯ ದೃಶ್ಯ…

Published

on

​ಪುತ್ತೂರು: ಪುತ್ತೂರು ಹೃದಯ ಭಾಗದಲ್ಲಿರುವ, ಈ ರಸ್ತೆಯಲ್ಲಿ ಬೆಳಕಿನ ಸೌಲಭ್ಯ ಕಲ್ಪಿಸುವ ವಿಚಾರಕ್ಕೆ ಯಾರೂ ಸ್ಪಂದಿಸದೆ ಇರುವುದರಿಂದ,ಈ ರಸ್ತೆಯಲ್ಲಿ ಸಂಚರಿಸುವ ಪಾದಾಚಾರಿಗಳು/ ಸಾರ್ವಜನಿಕರು ಹಲವು ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ದ್ವಿಮುಖ ರಸ್ತೆಯ ಕಾರ್ಯ ಭಾಗಶ ಪೂರ್ತಿಯಾದರೂ, ಉಳಿದ ರಸ್ತೆ ಪೂರ್ತಿಗೆ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದೆ ಬಾರದೆ ಇರುವುದರಿಂದ, ತಿರುವಿನಿಂದ ಕೂಡಿರುವ ಈ ರಸ್ತೆಯಲ್ಲಿ, ಅಪಘಾತಗಳು ನಿರಂತರವಾಗಿ ನಡೆಯುತ್ತಿದೆ. ಹಾರಾಡಿ ರೈಲ್ವೆ ಸೇತುವೆ ಬಳಿ ರಸ್ತೆ ಕಾಮಗಾರಿ, ಆರಂಭವಾಗಿರುವುದರಿಂದ,ಆ ರಸ್ತೆ ಮುಚ್ಚಿದ ಪರಿಣಾಮ, ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು, ಇದೇ ರಸ್ತೆಯಾಗಿ ಸಂಚರಿಸುತ್ತಿದೆ.

ಸಾರ್ವಜನಿಕರ ಪರವಾಗಿ ಸಂಬಂಧಪಟ್ಟವರಿಗೆ ನಾನು,ಹಲವಾರು ಬಾರಿ ಮನವಿ ನೀಡಿದರೂ, ವಾರ್ತಾ ಪತ್ರಿಕೆಗಳಲ್ಲಿ, ವರದಿಗಾರರು ಈ ಬಗ್ಗೆ ಎಚ್ಚರಿಸಿ ವರದಿ ನೀಡಿದರೂ, ಜನಪ್ರತಿನಿಧಿಗಳು / ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸದೆ ಇರುವುದರಿಂದ, ಇದು ಸಮಸ್ಯೆಯಾಗಿಯೇ ಉಳಿದಿದೆ. ಅಭಿವೃದ್ಧಿಯತ್ತ ಸಾಗುತ್ತಿರುವ ಪುತ್ತೂರಿಗೆ ಇದಕ್ಕಿಂತ ದೊಡ್ಡ ಕಳಂಕ ಬೇಕಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಸಾರ್ವಜನಿಕರ ಪರವಾಗಿ ವಕೀಲರಾದ ನೂರುದ್ದೀನ್ ಸಾಲ್ಮರ ಅಗ್ರಹಿಸಿದ್ದಾರೆ

 

Continue Reading
Click to comment

Leave a Reply

Your email address will not be published. Required fields are marked *

Advertisement