Published
12 hours agoon
By
Akkare News

ತಾರಸಿಯಿಂದ ತಳ್ಳಿದರೂ ಬದುಕುಳಿದಿದ್ದ! ಪೊಲೀಸ್ ತನಿಖೆಯ ಪ್ರಕಾರ, ಪತ್ನಿ ಸಂಧ್ಯಾ ತನಗೆ ಹಾಗೂ ತನ್ನ ಪ್ರಿಯಕರ ಅನಿಲ್ ನ ಸಂಬಂಧಕ್ಕೆ ಪ್ರಶಾಂತ್ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ ಆತನನ್ನು ಮುಗಿಸಲು ಸ್ಕೆಚ್ ಹಾಕಿದ್ದಳು. ಇದಕ್ಕಾಗಿ ಅನಿಲ್ ತನ್ನ ಸ್ನೇಹಿತ ವೆಂಕಟ ಸಾಯಿ ಸಹಾಯ ಪಡೆದಿದ್ದನು. ಜೂನ್ 28 ರಂದು ವೆಂಕಟ ಸಾಯಿ ಪ್ರಶಾಂತ್ ನನ್ನು ಮದ್ಯಪಾನ ಮಾಡಲು ಆಹ್ವಾನಿಸಿದ್ದನು. ಪಾರ್ಟಿ ಮುಗಿದ ನಂತರ ಪ್ರಶಾಂತ್ ನನ್ನು ಮೊದಲ ಮಹಡಿಯ ತಾರಸಿಗೆ ಕರೆದೊಯ್ದು ಅಲ್ಲಿಂದ ಕೆಳಗೆ ತಳ್ಳಲಾಗಿತ್ತು. ಆದರೆ ಅದೃಷ್ಟವಶಾತ್ ಪ್ರಶಾಂತ್ ಆ ಪೆಟ್ಟಿನಿಂದ ಬದುಕುಳಿದಿದ್ದನು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಮರುದಿನವೇ ಡಿಸ್ಚಾರ್ಜ್ ಮಾಡಲಾಗಿತ್ತು.


ಇದನ್ನೇ ಬಳಸಿಕೊಂಡ ನರ್ಸ್ ಸಂಧ್ಯಾ, ಆ ಕ್ಯಾನುಲಾ ಮೂಲಕವೇ ಪ್ರಶಾಂತ್ ದೇಹಕ್ಕೆ ತೀವ್ರ ನಿಶ್ಯಕ್ತಿ ತರುವ ದ್ರಾವಣ ಹಾಗೂ ಬಾತ್ ರೂಮ್ ತೊಳೆಯುವ ಟಾಯ್ಲೆಟ್ ಕ್ಲೀನರ್ ಲಿಕ್ವಿಡ್ ಅನ್ನು ಇಂಜೆಕ್ಟ್ ಮಾಡಿದ್ದಾಳೆ. ವಿಷಕಾರಿ ದ್ರಾವಣ ದೇಹದ ನರಗಳಿಗೆ ಹರಡಿ ಪ್ರಶಾಂತ್ ತೀವ್ರವಾಗಿ ಒದ್ದಾಡಿ ಸಾವನ್ನಪ್ಪಿದ್ದಾನೆ. ಆ ಬಳಿಕ ಆತನ ಶವವನ್ನು ಮಂಚದಿಂದ ಕೆಳಗೆ ತಳ್ಳಿ, ಮಂಚದಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ನಾಟಕವಾಡಿದ್ದರು.
ಸದ್ಯ ನಿಜಾಮಾಬಾದ್ ದಕ್ಷಿಣ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ಮೂವರೂ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಪ್ರಿಯಕರನ ಮೋಹಕ್ಕಾಗಿ ನರ್ಸ್ ಪತ್ನಿಯೊಬ್ಬಳು ತನ್ನದೇ ಪತಿಯ ನರಕ್ಕೆ ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಕೊಂದಿರುವ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.





