Connect with us

ಇತರ

7000 ಕೋಟಿ ರೂಪಾಯಿ ವೆಚ್ಚದ ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ ಮೊದಲ ಮಳೆಗೆ ಕುಸಿತ : 40% ಕಳಪೆ ಕಾಮಗಾರಿಯೇ…???

Published

on

ದೇಶದಲ್ಲಿ ಸೇತುವೆಗಳು – ಎಕ್ಸ್‌ಪ್ರೆಸ್ ವೇಗಳಲ್ಲಿ ಬಿರುಕು ಮೂಡುತ್ತಿರುವುದು, ಬೀಳುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸುದ್ದಿ ಆಗುತ್ತಿದೆ. ಆದರೆ ಇದೀಗ ಒಂದೇ ಮಳೆಗೆ ಬರೋಬ್ಬರಿ 7000 ಕೋಟಿ ರೂಪಾಯಿ ಕೊಚ್ಚಿ ಹೋದಂತೆ ಆಗಿದೆ. ದೇಶದ ಮಹತ್ವಾಕಾಂಕ್ಷೆಯ ಯೋಜನೆಯೊಂದು ಮುಂಗಾರು ಮಳೆಗೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗಿದೆ. ಕೋಟ್ಯಾಂತರ ರೂಪಾಯಿ ಒಂದೇ ಮಳೆಗೆ ನಷ್ಟವಾಗಿರುವುದು ದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸರಣಿ ಸೇತುವೆ ಕುಸಿತ ಹಾಗೂ ಸೇತುವೆಗಳ ಬಿರುಕು ಕಾಣಿಸಿಕೊಳ್ಳುವುದು ಸಾಮಾನ್ಯ ಎನ್ನುವಂತೆ ಆಗಿದೆ.

ಹೌದು ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಎಕ್ಸ್‌ಪ್ರೆಸ್‌ವೇಯಲ್ಲಿ ಒಂದೇ ಮಳೆಗೆ ಭಾರೀ ದುರಂತವೊಂದು ಸಂಭವಿಸಿದ್ದು ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಈ ಭಾಗದಲ್ಲಿ ಅತ್ಯಂತ ತೀವ್ರ ಟ್ರಾಫಿಕ್ ಜಾಮ್ ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಬರೋಬ್ಬರಿ 6,695 ಕೋಟಿ ರೂಪಾಯಿ ವೆಚ್ಚದ ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ ಕುಸಿದಿದೆ. ಮೊದಲ ಮಳೆಗೇ ಎಕ್ಸ್‌ಪ್ರೆಸ್‌ವೇ ಕುಸಿದಿರುವುದು ಹಾಗೂ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ದುರಂತ ಸಂಭವಿಸಿರುವುದು ಹಲವು ಪ್ರಶ್ನೆ ಹಾಗೂ ಅನುಮಾನಗಳಿಗೆ ಕಾರಣವಾಗಿದೆ. ಮೊದಲು ಇನ್ನೂ ಈ ಭಾಗದಲ್ಲಿ ಸಮಸ್ಯೆ ಆಗಿತ್ತು. ಆದರೆ ಕೆಲವೇ ದಿನಗಳಲ್ಲಿ ಎಕ್ಸ್‌ಪ್ರೆಸ್ ವೇ ಕುಸಿದು ಬಿದ್ದಿದೆ. ಮುಂಬೈ – ಪುಣೆ ಎಕ್ಸ್‌ಪ್ರೆಸ್‌ವೇಯ ಸುರಂಗ 2ರ ಪ್ರವೇಶದ್ವಾರದಲ್ಲಿ ಜುಲೈ 6ರ ಸೋಮವಾರ ಭೂಕುಸಿತ ಸಂಭವಿಸಿದೆ. ನಿರಂತರ ಮಳೆಯಿಂದ ಮಹಾರಾಷ್ಟ್ರದಲ್ಲಿ ಭಾರೀ ಅನಾಹುತಗಳು ಸಂಭವಿಸಿದೆ. ಆದರೆ ಮಳೆಯಿಂದ ಇಷ್ಟು ದೊಡ್ಡ ಎಕ್ಸ್‌ಪ್ರೆಸ್‌ವೇಯ ಸುರಂಗ ಮಾರ್ಗಕ್ಕೆ ಹಾನಿಯಾಗಿರುವುದು ಕಳಪೆ ಕಾಮಗಾರಿಯ ಕಾರಣವೇ ಎನ್ನುವ ಪ್ರಶ್ನೆ ಮೂಡಿಸಿದೆ. ಬೀದಿಗಳಲ್ಲಿ ಮಳೆ ನೀರು ನದಿಗಳಾಗಿ ಬದಲಾಗಿವೆ. ಕಾರಿಡಾರ್ ಸುಮಾರು 18 ಗಂಟೆಗಳ ಕಾಲ ಮುಚ್ಚಲ್ಪಟ್ಟಿತ್ತು. ಇದರಿಂದಾಗಿ ಹಳೆಯ ಮುಂಬೈ-ಪುಣೆ ಹೆದ್ದಾರಿಯಲ್ಲಿ ಸಂಚಾರ ಮತ್ತೆ ಆರಂಭವಾಯಿತು ಮತ್ತು ಸಾವಿರಾರು ಪ್ರಯಾಣಿಕರ ಜೀವನವು ಸಂಪೂರ್ಣ ಅಸ್ತವ್ಯಸ್ತವಾಯಿತು ಎಂದು ವರದಿಯಾಗಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC)ವು ಭಾರೀ ಮಳೆಯಿಂದ ಈ ಹಾನಿ ಸಂಭವಿಸಿದೆ ಎಂದು ಹೇಳಿದರೂ, ಸುರಂಗ ಮಾರ್ಗ ಮತ್ತು ಭೂತಾಂತ್ರಿಕ ತಜ್ಞರು ಮಳೆ ಅಸಾಮಾನ್ಯವಾಗಿದ್ದರೂ, ಕಾಮಗಾರಿ ವೇಳೆಗೆ ಕೆಲವೊಂದು ಕ್ರಮಗಳನ್ನು ಅನುಸರಿಸಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಸಂಭವಿಸಿದ ದುರಂತವೇನು

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಮಿಸ್ಸಿಂಗ್ ಲಿಂಕ್‌ನಲ್ಲಿ ಸುರಂಗ 2ರ ನಿರ್ಗಮನದ ಬಳಿ ಭೂಕುಸಿತ ಸಂಭವಿಸಿದ ನಂತರ ಸಂಚಾರ ಅಸ್ತವ್ಯಸ್ತವಾಗಿತ್ತು. ಭಾರೀ ಮಳೆಯು ಸುರಂಗದ ಸುತ್ತಲಿನ ಇಳಿಜಾರು ಭಾಗದಲ್ಲಿ ಹಾನಿಯನ್ನುಂಟು ಮಾಡಿದೆ. ಭಾರೀ ಮಳೆಯ ಕಾರಣಕ್ಕಾಗಿ ಈ ದುರಂತ ಸಂಭವಿಸಿದೆ ಎಂದು ಸರ್ಕಾರ ಹೇಳಿದೆಯಾದರೂ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇನ್ನು ಸುರಂಗ ದುರಂತದ ಬಗ್ಗೆ ಪ್ರಶ್ನೆ ಮಾಡಿರುವ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಪಹಾಸ್ಯ ಮಾಡಿದ್ದು, ಅಸಭ್ಯ ಪದಗಳನ್ನು ಬಳಸಿ ಟೀಕೆ ಮಾಡಿದ್ದಾರೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement