ಬೆಂಗಳೂರು:ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ರಾಜ್ಯದಲ್ಲಿ 1 ಕೋಟಿ 11 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಗೈರಾದವರು (Absent): 14,30,012 ಸ್ಥಳಾಂತರಗೊಂಡವರು (Shifted): 66,64,943 ಮೃತಪಟ್ಟವರು (Dead): 16,30,872 ನಕಲಿ ಹೆಸರುಗಳು (Duplicate): 6,89,904 ಇತರೆ ಕಾರಣಗಳು (Others): 4,88,974 ಒಟ್ಟು 1,11,47,05 ಮತದಾರರು ASDDO ಪಟ್ಟಿಯಲ್ಲಿದ್ದಾರೆ.

ASDDO ಎಂದರೇನು? ‘A’ ಅಂದರೆ Absent. ಅಂದರೆ ಸ್ಥಳದಲ್ಲಿ ಲಭ್ಯವಿಲ್ಲದವರು ಅಥವಾ ಫಾರಂ ಸಲ್ಲಿಸದವರು. ‘S’ ಅಂದರೆ Shifted. ಅಂದರೆ ತಮ್ಮ ನಿವಾಸವನ್ನು ಬದಲಾಯಿಸಿರುವ ಮತದಾರರು. ‘D’ ಅಂದರೆ Dead. ಅಂದರೆ ಮೃತಪಟ್ಟಿರುವ ಮತದಾರರು. ‘D’ ಅಂದರೆ Duplicate. ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವ ಅಥವಾ ನಕಲಿ ಮತದಾರರು. ‘O’ ಅಂದರೆ Others. ಇತರೆ ಕಾರಣಗಳಿಂದ ಪ್ರಕ್ರಿಯೆಯಲ್ಲಿ ಭಾಗಿಯಾಗದವರು.

ಬೆಂಗಳೂರಿನಲ್ಲಿ 49 ಲಕ್ಷಕ್ಕೂ ಹೆಚ್ಚು ಹೆಸರುಗಳು ASDDO ಪಟ್ಟಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲೂ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳು ASDDO ಪಟ್ಟಿಗೆ ಸೇರಿವೆ. ಬೆಂಗಳೂರಿನಲ್ಲಿ ಒಟ್ಟು 1,03,88,363 ಮತದಾರರಿಗೆ ಫಾರಂ ನೀಡಲಾಗಿತ್ತು. ಇದರಲ್ಲಿ 49,42,750 ಮತದಾರರನ್ನು ASDDO ಪಟ್ಟಿಗೆ ಸೇರಿಸಲಾಗಿದೆ. ಬೆಂಗಳೂರಿನ ವಿವರ: Absent: 7,96,277 Shifted: 33,80,013 Dead: 3,15,335 Duplicate: 60,092 Others: 3,91,033 ಆಗಸ್ಟ್ 8ರ ಬಳಿಕ ಅಂತಿಮ ಮಾಹಿತಿ SIR ಪ್ರಕ್ರಿಯೆಯಲ್ಲಿ ಇನ್ನೂ ಸ್ವಲ್ಪ ಡಿಜಿಟಲೀಕರಣ ಕಾರ್ಯ ಬಾಕಿ ಉಳಿದಿದ್ದು, ಅದನ್ನು ಪೂರ್ಣಗೊಳಿಸಿದ ಬಳಿಕ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅಂತಿಮ ಅಂಕಿ-ಅಂಶಗಳು ಆಗಸ್ಟ್ 8ರ ನಂತರ ಬಿಡುಗಡೆಯಾಗುವ ಸಾಧ್ಯತೆ ಇದೆ.

ASDDO ಪಟ್ಟಿಯಲ್ಲಿರುವ ಮತದಾರರಿಗೆ ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಲು ಹಾಗೂ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ವಿಳಾಸ ಬದಲಾವಣೆ ಅಥವಾ ಇತರೆ ತಿದ್ದುಪಡಿಗಳಿಗಾಗಿ Form 6 ಮತ್ತು Form 8 ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.


