Connect with us

ಇತರ

ಬೆಳ್ಳಿಪ್ಪಾಡಿ ಕ್ರಾಸ್ ಬಳಿಯ ಅಪಾಯಕಾರಿ ಮರ ತೆರವು: ಸಾಮಾಜಿಕ ಕಾರ್ಯಕರ್ತ ಪದ್ಮಪ್ಪ ಪೂಜಾರಿ ಪ್ರಯತ್ನಕ್ಕೆ ಸಂದ ಜಯ

Published

on

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಕ್ರಾಸ್ ಪಕ್ಕದ ಹೆಗ್ಡೆಹಿತ್ಲು ಸಮೀಪ ಇದ್ದ ಅಪಾಯಕಾರಿ ಮರವನ್ನು ತೆರವು ಮಾಡಲಾಗಿದೆ. ಈ ಅಪಾಯಕಾರಿ ಮರವನ್ನು ತೆರವು ಮಾಡುವಂತೆ ಬಿಲ್ಲವ ಬ್ರಿಗೇಡ್ ಬೆಳ್ಳಿಪ್ಪಾಡಿ ಗ್ರಾಮಸಮಿತಿಯ ಅಧ್ಯಕ್ಷರಾದ ಸಾಮಾಜಿಕ ಕಾರ್ಯಕರ್ತ ಪದ್ಮಪ್ಪ ಪೂಜಾರಿ ಪರನೀರು ಅವರು ಅರಣ್ಯ ಇಲಾಖೆ ಮತ್ತು ಮೆಸ್ಕಾಂಗೆ ಅರ್ಜಿ ಸಲ್ಲಿಸಿದ್ದರು.

ಇದೀಗ ಇಲಾಖೆಯವರು ಅಪಾಯಕಾರಿ ಮರ ತೆರವುಗೊಳಿಸಿದ್ದಾರೆ. ಸಾರ್ವಜನಿಕರು ಪದ್ಮಪ್ಪ ಪೂಜಾರಿ ಮತ್ತು ಮೆಸ್ಕಾಂ ಸದಾನಂದ ರವರ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಮರ ತೆರವು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು, ಉಷಾ ಕೊರ್ತಾಜೆ,ಉಷಾ ಕೋರ್ಯ ಮೊದಲದವರು ಉಪಸ್ಥಿತರಿದ್ದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement