Connect with us

ಇತ್ತೀಚಿನ ಸುದ್ದಿಗಳು

ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್​! ‘ಸಾಹುಕಾರ್’​ ಮನೆ ಮೇಲೆ ದಾಳಿ, ಪರಿಶೀಲನೆ

Published

on

ಬೆಂಗಳೂರು (ಸೆ.09): ಬೆಳ್ಳಂ ಬೆಳಗ್ಗೆಯೇ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್ ಕೊಟ್ಟಿದ್ದು, ಸದಾಶಿವನಗರದ ಸರ್ಕಾರಿ ಮನೆ, ಡಾಲರ್ಸ್ ಕಾಲೋನಿಯ ಮನೆ ಸೇರಿದಂತೆ ಏಕಾಕಾಲದಲ್ಲೇ ಹಲವು ಕಡೆ ಇಡಿ ದಾಳಿ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿ ಮನೆ ಮೇಲೆ ದಾಖಲೆಗಳ ಪರಿಶೀಲನೆ ನಡೆಸಲಾಗ್ತಿದೆ. ಜಾರಕಿಹೊಳಿಗೂ ಇಡಿ ಶಾಕ್
ಕೆಲ ದಿನಗಳ ಹಿಂದಷ್ಟೇ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಮಂಜುನಾಥ್​ಗೆ ಸೇರಿದ ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿತ್ತು. ಇದೀಗ ಸಚಿವ ಸತೀಶ್ ಜಾರಕಿಹೊಳಿಗೂ ಇಡಿ ಶಾಕ್ ಕೊಟ್ಟಿದೆ. ಸದಾಶಿವನಗರದ ಸರ್ಕಾರಿ ಮನೆ, ಡಾಲರ್ಸ್ ಕಾಲೋನಿಯ ಮನೆ ಸೇರಿ ಒಟ್ಟು 18 ಕಡೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರಿ ನಿವಾಸದಲ್ಲೇ ಇದ್ದಾರೆ ಸತೀಶ್ ಜಾರಕಿಹೊಳಿ
ಹದಿನೆಂಟು ವೆಹಿಕಲ್ ಗಳಲ್ಲಿ 25ಕ್ಕೂ ಹೆಚ್ಚು ಅಧಿಕಾರಿಗಳು ಆಗಮಿಸಿ ದಾಳಿ ನಡೆಸಿದ್ದಾರೆ. ಬೆಳಗ್ಗೆ 7 ಗಂಟೆಗೆ ಏಕಾಏಕಿ ದಾಳಿ ನಡೆಸಿದ್ದು, ಬೆಂಗಳೂರಿನಲ್ಲೇ ಒಟ್ಟು ಆರು ಕಡೆ ಪರಿಶೀಲನೆ ನಡೆಸಲಾಗ್ತಿದೆ. ಸದ್ಯ ಸರ್ಕಾರಿ ನಿವಾಸದಲ್ಲೇ ಸಚಿವ ಸತೀಶ್ ಜಾರಕಿಹೊಳಿ ಇದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement