Published
31 minutes agoon
By
Akkare News
ಬೆಂಗಳೂರು: ಗುತ್ತಿಗೆದಾರರ ಬಿಲ್‌ಗಳ ಪರಿಶೀಲನೆ ಮತ್ತು ಪಾವತಿ ಪ್ರಕ್ರಿಯೆಯನ್ನು ಇನ್ನಷ್ಟು ವೇಗ, ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿಸಲು ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಹಲವು ಕ್ರಾಂತಿಕಾರಿ ಸುಧಾರಣೆಗಳನ್ನು ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸರ್ಕಾರಿ ಅನುದಾನದ ಕಾಮಗಾರಿಗಳಾಗಲಿ ಅಥವಾ ನಗರ ಪಾಲಿಕೆಗಳ ಸ್ವಂತ ನಿಧಿಯ ಕಾಮಗಾರಿಗಳಾಗಲಿ, ಎಲ್ಲಕ್ಕೂ ಈ ಹೊಸ ನಿಯಮಗಳು ಏಕರೂಪವಾಗಿ ಅನ್ವಯಿಸಲಿವೆ.
ಸಾರ್ವಜನಿಕ ಕಾಮಗಾರಿಗಳ ಬಿಲ್ ಸಲ್ಲಿಕೆ ಮತ್ತು ಪಾವತಿಯಲ್ಲಿ ಎದುರಾಗುತ್ತಿದ್ದ ಸುದೀರ್ಘ ವಿಳಂಬ ಹಾಗೂ ಅನಿಶ್ಚಿತತೆಗೆ ಮುಕ್ತಿ ನೀಡುವುದು ಈ ಸುಧಾರಣೆಗಳ ಪ್ರಮುಖ ಉದ್ದೇಶವಾಗಿದೆ. ಈ ಹಿಂದಿನ ಹಂತ-ಹಂತದ ಕೈ ಬರಹದ ಪರಿಶೀಲನೆಗಳ ಬದಲಿಗೆ, ಪ್ರತಿಯೊಂದು ಹಂತದಲ್ಲೂ ಸ್ಪಷ್ಟ ಹೊಣೆಗಾರಿಕೆ, ಕೆಲಸಕ್ಕೆ ವೇಗ ತುಂಬುವ ಹಾಗೂ ಪಾರದರ್ಶಕವಾದ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. 
ವೇಗದ ಮತ್ತು ಸರಳ ಬಿಲ್ ವಿಲೇವಾರಿ


