Published
2 hours agoon
By
Akkare News
ಬೆಂಗಳೂರು: ಕೆಎಂಎಫ್ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ಅನ್ವಯವಾಗುವಂತೆ 8 ರೂಪಾಯಿ ಹೆಚ್ಚಳ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ನವೆಂಬರ್ 1 ರಿಂದ ಜಾರಿಗೆ ಬರಲಿದೆ.

ಈ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಾಲಿನ ದರ ಹೆಚ್ಚಳಕ್ಕೆ ಹಲವು ತಿಂಗಳುಗಳಿಂದ ಹಾಲು ನಿಗಮ ಮಂಡಳಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಕೆಎಂಎಫ್ ಕೂಡ ಸರ್ಕಾರಕ್ಕೆ ಕಳೆದ ತಿಂಗಳೇ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಸರ್ಕಾರ ದರ ಏರಿಕೆಗೆ ಸಮ್ಮತಿ ಸೂಚಿಸಿದೆ.
ದರ ಏರಿಕೆಯ 8 ರೂಪಾಯಿಯಲ್ಲಿ 7 ರೂಪಾಯಿಯನ್ನು ರೈತರಿಗೆ ಸಹಾಯಧನವಾಗಿ ನೀಡಲು ನಿರ್ಧರಿಸಲಾಗಿದೆ. ರೈತರಿಗೆ ಬಮುಲ್ ವ್ಯಾಪ್ತಿಯಲ್ಲಿ ಸದ್ಯ ಪ್ರತಿ ಲೀಟರ್ಗೆ 33 ರೂ. ದಿಂದ 35 ರೂ. ನೀಡಲಾಗುತ್ತಿದ್ದು, ಆ ಮೊತ್ತ 40 ರಿಂದ 42 ರೂಪಾಯಿಗೆ ಹೆಚ್ಚಳವಾಗಲಿದೆ. ಹೆಚ್ಚುವರಿ 1 ರೂಪಾಯಿಯನ್ನು ಹಾಲು ಮಂಡಳಿಗಳ ಪಾಲಾಗಿದೆ. 
| ಹಾಲಿನ ವಿಧ / ಉತ್ಪನ್ನ | 500 ಎಂಎಲ್ (ರೂ.) | 1 ಲೀಟರ್ (ರೂ.) |
| ಟೋನ್ಡ್ ಹಾಲು | 24 | 46 |
| ಶುಭಂ ಹಾಲು | 26 | 52 |
| ಸಮೃದ್ಧಿ ಹಾಲು | 28 | 56 |
| ಹೋಮೋಜಿನೈಸ್ಡ್ ಹಸುವಿನ ಹಾಲು | 26 | 52 |
| ಸ್ಪೆಷಲ್ ಹಾಲು | 27 | 54 |
| ಗುಡ್ಲೈಫ್ ಹಾಲು | 36 | 70 |
| ನಂದಿನಿ ಮೊಸರು | 26 | 50 |
| ನಂದಿನಿ ಶುದ್ಧ ತುಪ್ಪ | 340 – 350 | 680 – 700 |


ಹೊಸ ದರಪಟ್ಟಿಯನ್ನು ಕೆಎಂಎಫ್ ಬಿಡುಗಡೆ ಮಾಡಬೇಕಿದ್ದು, ಆ ಬಳಿಕ ನೂತನ ದರ ಎಷ್ಟಾಗಲಿದೆ ಎಂಬ ಖಚಿತ ಮಾಹಿತಿ ಸಿಗಲಿದೆ.


