Published
1 year agoon
By
Akkare Newsಪಂಚರಾಜ್ಯ ಚುನಾವಣೆ ಮುಗಿದು ಫಲಿತಾಂಶ ಕೂಡ ಹೊರಬಿದ್ದಿದೆ. ಇದರಲ್ಲಿ ಬಿಜೆಪಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರ ಹಿಡಿದಿದೆ. ಬಿಜೆಪಿ ಗೆಲ್ಲುವದೇನೋ ಗೆದ್ದಿದೆ, ಆದರೆ ಇದೀಗ 3 ರಾಜ್ಯಗಳಿಗೂ ಮುಖ್ಯಮಂತ್ರಿ ಆಯ್ಕೆಮಾಡಲು ಕಸರತ್ತು ನಡೆಸಿದೆ. ಈ ನಡುವೆ ರಾಜಸ್ಥಾನದಲ್ಲಿ 30 ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ವಿಚಾರ ಸುದ್ದಿಯಾಗುತ್ತಿದೆ.
ಹೌದು, ರಾಜಸ್ಥಾನದಲ್ಲಿ ಈ ಮೊದಲು ಕಾಂಗ್ರೆಸ್ ಸರ್ಕಾರವಿತ್ತು. ಅದಕ್ಕೂ ಮೊದಲು ವಸುಂಧರಾ ರಾಜೆ ಅವರ ನೇತೃತ್ವದ ಬಿಜೆಪಿ ಸರ್ಕಾರವಿತ್ತು. ಆಡಳಿತ ವಿಫಲವಾದ ಕಾರಣ ಜನರು ಕಾಂಗ್ರೆಸ್ ಗೆ ಜೈ ಅಂದರು. ಆದರೆ ಕಾಂಗ್ರೆಸ್ ಕೂಡ ಉತ್ತಮ ಆಡಳಿತ ನೀಡದೇ ಇದ್ದಾಗ, ಮೋದಿ ಹವಾ ಇರೋಂದ್ರಿಂದ ಈ ಭಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಇದೀಗ ಇಲ್ಲಿ ಸಿಎಂ ಆಯ್ಕೆ ವಿಚಾರ ಬಿಜೆಪಿಗೆ ಕಗ್ಗಂಟಾಗಿದೆ. ಯಾಕೆಂದರೆ ಬಿಜೆಪಿ ಪ್ರಬಲ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿಯಾದ ವಸುಂಧರಾ ರಾಜೆ ಅವರು ಈ ಭಾರೀಯೂ ತನಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ 30 ಶಾಸಕರನ್ನು ಸೇರಿಸಿಕೊಂಡು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಭಾರೀ ಸಂಚಲನ ಸೃಷ್ಟಿಸಿದೆ.
ಅಂದ ಹಾಗೆ ರಾಜಸ್ಥಾನದಲ್ಲಿ ಬಾಲಕನಾಥ್ ಯೋಗಿ ಅವರಿಗೆ ಮುಖ್ಯಮಂತ್ರಿ ಪಟ್ಟ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು. ಆದರೆ ಸಿಎಂ ಪಟ್ಟದ ಮೇಲೆ ಮತ್ತೆ ಕಣ್ಣಿಟ್ಟಿರುವ ವಸುಂದರಾ ರಾಜೆ ಅವರು ಹೊಸದಾಗಿ ಆಯ್ಕೆಯಾದ 30 ಶಾಸಕರನ್ನು ಮನೆಗೆ ಕರೆಸಿಕೊಂಡು ಸಭೆ ನಡೆಸಿರುವ ಮಾಜಿ ಸಿಎಂ, ಬಿಜೆಪಿ ನಾಯಕಿ ವಸುಂಧರಾ ರಾಜೆ, ಸಿಎಂ ಮಾಡದಿದ್ದರೆ ಪಕ್ಷಾಂತರ ಮಾಡುವ ಸಾಧ್ಯತೆಗಳಿವೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ದೆಹಲಿ ತಲುಪಿರುವ ವಸುಂಧರಾ ರಾಜೆ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ.