Connect with us

ಇತರ

ರಷ್ಯಾ ತೈಲಕ್ಕೆ ಅಡ್ಡಿ ಇಲ್ಲ, ಭಾರತದಲ್ಲಿ ಪೆಟ್ರೋಲ್ & ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ…

Published

on

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿ ಇದೀಗ ಭಾರಿ ದೊಡ್ಡ ಬದಲಾವಣೆಗೆ ನಾಂದಿ ಹಾಡುವ ಸಾಧ್ಯತೆ ದಟ್ಟವಾಗಿದೆ. ಒಂದು ಕಡೆ ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ಇದೀಗ ದೊಡ್ಡ ಒಪ್ಪಂದ ಮಾಡಿಕೊಂಡಿವೆ. ಇದರ ಜೊತೆಗೆ ಆರ್ಥಿಕತೆ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುವ ಇಂಧನ ಪೂರೈಕೆ ವಿಚಾರದಲ್ಲಿ ಕೂಡ ರಷ್ಯಾ ಅಧ್ಯಕ್ಷ ಪುಟಿನ್ ಈಗ ಭಾರಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ರಷ್ಯಾ ತೈಲಕ್ಕೆ ಅಡ್ಡಿ ಇಲ್ಲ, ಭಾರತದಲ್ಲಿ ಪೆಟ್ರೋಲ್ & ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ..

ಜಗತ್ತಿನಲ್ಲಿ ಅತಿಹೆಚ್ಚು ತೈಲ ಪೂರೈಕೆ ಮಾಡುವ ದೇಶಗಳ ಪೈಕಿ ರಷ್ಯಾ ಕೂಡ ಒಂದಾಗಿದೆ. ಈ ದೇಶ ಇಡೀ ಯುರೋಪ್ ಖಂಡದ ಇಂಧನ ಪೂರೈಕೆಗೆ ದೊಡ್ಡ ಕೊಡುಗೆ ನೀಡುತ್ತಾ ಬಂದಿತ್ತು. ಈ ಕಾರಣಕ್ಕೆ ಯುರೋಪ್ ದೇಶಗಳು ಕೂಡ ರಷ್ಯಾ ಮೂಲಕ ಭಾರಿ ದೊಡ್ಡ ಮಟ್ಟದಲ್ಲಿ ತೈಲ ಅಂದ್ರೆ, ಪೆಟ್ರೋಲ್ & ಡೀಸೆಲ್ ಸೇರಿದಂತೆ ಗ್ಯಾಸ್ ಕೂಡ ಖರೀದಿ ಮಾಡುತ್ತಿದ್ದವು. ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಶುರುವಾದ ನಂತರ ರಷ್ಯಾ ಮೂಲಕ ಖರೀದಿ ಮಾಡುತ್ತಿದ್ದ ಇಂಧನದ ವ್ಯಾಪಾರ ನಿಲ್ಲಿಸಿತ್ತು ಯುರೋಪ್ ಒಕ್ಕೂಟ. ಹೀಗಾಗಿ ಕೊನೆಗೆ ರಷ್ಯಾ ಭಾರಿ ಪ್ರಮಾಣದಲ್ಲಿ ತೈಲ ಮಾರಾಟವನ್ನು ಭಾರತಕ್ಕೆ ಶಿಫ್ಟ್ ಮಾಡಿತ್ತು. ಇದೀಗ ಇದೇ ವಿಚಾರ ಭಾರತಕ್ಕೆ ಮತ್ತೊಮ್ಮೆ ಪ್ಲಸ್ ಪಾಯಿಂಟ್ ಆಗುತ್ತಿದೆ.

ಭಾರತಕ್ಕೆ ಪೆಟ್ರೋಲ್ & ಡೀಸೆಲ್ ಭರ್ಜರಿ! ಹೌದು, ರಷ್ಯಾ ಮೂಲಕ ಭಾರತ ದೊಡ್ಡ ಪ್ರಮಾಣದಲ್ಲಿ ಇಂಧನ ಖರೀದಿ ಮಾಡುತ್ತಿದೆ ಎಂಬ ವಿಚಾರಕ್ಕೆ ಅಮೆರಿಕ ಕೂಡ ಕಿರಿಕ್ ಮಾಡಿತ್ತು. ಆದರೆ ಕೊನೆಗೆ ಒಪ್ಪಂದಗಳು ನಡೆದಿದ್ದರೂ, ಈಗ ರಷ್ಯಾ ಅಧ್ಯಕ್ಷ ಪುಟಿನ್ ಮಾತ್ರ ಭಾರತಕ್ಕೆ ಪೂರೈಕೆ ಮಾಡುವ ಇಂಧನ ಪ್ರಮಾಣದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದಿದ್ದಾರೆ. ಈ ಮೂಲಕ ಭಾರತಕ್ಕೆ ಮೊದಲಿನ ರೀತಿಯೇ ಇಂಧನ ಪೂರೈಕೆ ಗ್ಯಾರಂಟಿ ಆಗಿದೆ. ಹಾಗಾದರೆ ಭಾರತದಲ್ಲಿ ಪೆಟ್ರೋಲ್ & ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ ಇದೆಯಾ?

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version