ಅಭಿವೃದ್ಧಿ ಕಾರ್ಯಗಳು ಆರೋಗ್ಯ ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಇಂದು ಚೇತನಾ ಆಸ್ಪತ್ರೆಯಲ್ಲಿ ಉಚಿತ ಫೈಬ್ರೋ ಸ್ಕ್ಯಾನ್ ಲಿವರ್ ಫಂಕ್ಷನ್ ಟೆಸ್ಟ್ ತಪಾಸಣೆಅಭಿವೃದ್ಧಿ ಕಾರ್ಯಗಳು ಆರೋಗ್ಯ ಇಂದಿನ ಕಾರ್ಯಕ್ರಮ ಇತರ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಜೀವನಶೈಲಿ ತಂತ್ರಜ್ಞಾನ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಫೆ.22 ರಂದು ಕೋಡಿಂಬಾಡಿ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ *ರೇಬಿಸ್ ರೋಗ ನಿರೋಧಕ ಉಚಿತ ಲಸಿಕಾ ಯಶಸ್ವಿ ಕಾರ್ಯಕ್ರಮ 250 ಕ್ಕೂ ಮಿಕ್ಕಿ ಸ್ವನ ಗಳಿಗೆ ಲಸಿಕೆಅಭಿವೃದ್ಧಿ ಕಾರ್ಯಗಳು ಆರೋಗ್ಯ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ವಾಣಿಜ್ಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಫೆ.22 ರಂದು ಕೋಡಿಂಬಾಡಿ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಉಚಿತ ಲಸಿಕಾ ಕಾರ್ಯಕ್ರಮಅಭಿವೃದ್ಧಿ ಕಾರ್ಯಗಳು ಆರೋಗ್ಯ ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಆತ್ರೇಯ ಮಲ್ಟಿಸ್ಲೆಷಲಿಟಿ ಕ್ಲಿನಿಕ್ ಪುತ್ತೂರುವತಿಯಿಂದ : ಉಚಿತ ಗುದಾಗತ ರೋಗಗಳ ತಪಾಸಣಾ ಶಿಬಿರ (ಪೈಲ್ಸ್, ಫಿಷರ್, ಫಿಸ್ತುಲ)Published
1 year agoon
By
Akkare Newsಕಳೆದ ಕೆಲ ದಿನಗಳ ಅಂತರದಲ್ಲಿ ಉತ್ತರ ಕೇರಳದ ಜಿಲ್ಲೆಗಳಲ್ಲಿ ಇಬ್ಬರು ಕೋವಿಡ್ -19 ರ ಹೊಸ ರೂಪಾಂತಾರಿ ವೈರಸ್ ಗೆ (UNT Covid subvariant) ಸಾವನ್ನಪ್ಪಿದ್ದಾರೆ. ಈ ಬಳಿಕ ರಾಜ್ಯಾದ್ಯಂತ ಸೋಂಕಿನ ವಿರುದ್ಧ ಕೇರಳದ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಕಳೆದ ಕೆಲ ದಿನಗಳಿಂದ ಕೇರಳದಲ್ಲಿ ಕೋರೊನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಾಣಿಸಿದೆ.
ಕೋಯಿಕ್ಕೋಡ್ ಜಿಲ್ಲೆಯ ವಟ್ಟೋಲಿಯ ಕಲಿಯಟ್ಟುಪರಂಬತ್ ಕುಮಾರನ್ (77) ಮತ್ತು ಕಣ್ಣೂರು ಜಿಲ್ಲೆಯ ಪಾನೂರಿನ ಪಾಲಕಂಡಿ ಅಬ್ದುಲ್ಲಾ (82) ಈ ನವ ರೂಪಾಂತರಿ ಸೋಂಕಿಗೆ ಬಲಿಯಾದವರು. ಕುಮಾರನ್ ಅವರ ನಿಧನದ ಬಳಿಕ ನಡೆಸಿದ ಲ್ಯಾಚ್ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ -19 ದೃಢಪಟ್ಟಿತ್ತು. ಕೆಮ್ಮು ಮತ್ತು ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯುತ್ತಿದ್ದ ಅಬ್ದುಲ್ಲಾ ಕೂಡ ಇದೆ ಸೋಂಕಿಗೆ ಬಲಿಯಾಗಿದ್ದಾರೆ. ತಿಂಗಳ ಬಳಿಕ ಕೇರಳದಲ್ಲಿ ಕೋವಿಡ್ ನಿಂದ ಸಾವು ಸಂಭವಿಸಿದೆ.
2020, 2021 ಜಗತ್ತನ್ನೆ ತಲ್ಲಣಿಸುವಂತೆ ಮಾಡಿದ ಕೋವಿಡ್ ಕಳೆದೊಂದು ವರ್ಷದಿಂದ ಕಡಿಮೆಯಾಗಿತ್ತು. 2019ರ ಡಿಸೆಂಬರ್ ತಿಂಗಳಿನಲ್ಲಿ ಚೀನಾದಲ್ಲಿ ಕೊರೊನಾ ಮೊದಲ ಬಾರಿ ಅಟ್ಟಹಾಸ ಮೆರೆದಿತ್ತು. ಇದೀಗ ಸರಿಯಾಗಿ 4 ವರ್ಷ ಬಳಿಕ ಮತ್ತೆ ಡಿಸೆಂಬರ್ ತಿಂಗಳಿನಲ್ಲಿ ಕೊರೊನಾ ತನ್ನ ಪ್ರತಾಪ ತೋರಿಸಲು ಆರಂಭಿಸಿದೆ.
ಕಳೆದ ಒಂದು ವಾರದಲ್ಲಿ ಕೇರಳದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದರೊಂದಿಗೆ ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1296 ಕ್ಕೇರಿದೆ ಶುಕ್ರವಾರ ದೇಶದಲ್ಲಿ 17,605 ಮಂದಿಯ ತಪಾಸಣೆ ನಡೆಸಲಾಗಿದ್ದು, 312 ಮಂದಿಗೆ ರೋಗ ದೃಢಪಟ್ಟಿದೆ. ಈ ಪೈಕಿ 280 ರೋಗಿಗಳು ಕೇರಳದಲ್ಲಿದ್ದಾರೆ. ಪರೀಕ್ಷಾ ಧನಾತ್ಮಕತೆಯ ದರ ಶೇ.1.7ಕ್ಕೇರಿದೆ.
ಓಮಿಕ್ರಾನ್‌ನ ಉಪ ರೂಪವಾದ ಜೆಎನ್-1 ಕೇರಳದಲ್ಲಿ ಇರುವುದನ್ನು ಕೇಂದ್ರ ಸರಕಾರ ಶನಿವಾರ ಖಚಿತಪಡಿಸಿದೆ. ಈ ರೂಪಾಂತರಿ ಮೊದಲು ಆಗಸ್ಟ್‌ನಲ್ಲಿ ಲಕ್ಸೆಂಬರ್ಗ್‌ನಲ್ಲಿ ವರದಿಯಾಗಿತ್ತು. ಇದು ಬಳಿಕ ಇತರ ದೇಶಗಳಿಗೆ ಹರಡಿದೆ. ಬಿಎ 2.86 ರೂಪಾಂತರವನ್ನು ಪಿರೋಲಾ ಎಂದೂ ಕರೆಯಲಾಗುತ್ತದೆ. ಇದು ಇತ್ತೀಚೆಗೆ ಯುಎಸ್ ಮತ್ತು ಚೀನಾದಲ್ಲಿ ಪತ್ತೆಯಾಗಿದೆ.ಜೆಎನ್ ೧ ರೂಪಾಂತರಿ ವೈರಸ್ ಆನ್ನೇಯ ಏಷ್ಯಾದ ದೇಶಗಳಾದ ಸಿಂಗಾಪುರ ಮತ್ತು ಇಂಡೋನೇಷ್ಯಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆಜೆ ಎನ್-1 ಕೋವಿಡ್ ಅದೇ ಸಾಮಾನ್ಯ ಲಕ್ಷಣಗಳನ್ನು ಹೊಂದಿದೆ ಇದೇ ವೇಳೆ ಚೀನಾದಲ್ಲಿ ಹೊಸ ಕೋವಿಡ್ ರೂಪಾಂತರವೂ ದೃಢಪಟ್ಟಿದೆ.