ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಕಡಬ: ಮೂರು ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಮನೆಯೊಂದಕ್ಕೆ ಪೊಲೀಸ್ ರೈಡ್

Published

on

ಕಡಬ/ಆಲಂಕಾರು: ಅಕ್ರಮವಾಗಿ ಮೂರು‌ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಖಚಿತ ಮಾಹಿತಿ‌ ಮೇರೆಗೆ ಪೊಲೀಸರು ಮನೆಯೊಂದಕ್ಕೆ ದಾಳಿ ಮಾಡಿದ ಘಟನೆ ಮಾ.28 ರಂದು ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಕೆಮ್ಮಾರದಿಂದ ವರದಿಯಾಗಿದೆ.

ಖಚಿತ ಮಾಹಿತಿ ಮೇರೆಗೆ ಎಸ್.ಐ ಅಭಿನಂದನ್ ನೇತೃತ್ವದ ಪೊಲೀಸರು ಕೊಯಿಲ ಗ್ರಾಮದ ಕೆಮ್ಮಾರ ಆಕೀರ ಎಂಬಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಸ್ಥಳಕ್ಕೆ ದಾಳಿ‌ ಮಾಡಿರುವುದಾಗಿದೆ.ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.

ಆರೋಪಿತರಾದ ಕೊಯಿಲಾ ಗ್ರಾಮದ ಇಲ್ಯಾಸ್ ಮತ್ತು ಬೆಳ್ತಂಗಡಿ ತಾಲೂಕು ಕಲ್ಲೇರಿ ಗ್ರಾಮದ ಮಹಮ್ಮದ್‌ ಆಮು ಎಂಬವರು ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ 3 ದನಗಳನ್ನು ವಧೆ ಮಾಡುತ್ತಿರುವುದಾಗಿರುದು ಈ ವೇಳೆ ತಿಳಿದು ಬಂದಿದೆ.







ಆರೋಪಿತರು ವಧೆ ಮಾಡಿದ ಸ್ಥಳದಲ್ಲಿದ್ದ 94 ಕೆ.ಜಿ ತೂಕ ದನದ ಮಾಂಸ ಮತ್ತು ವಧೆ ಮಾಡಿದ ದನದ ಕಾಲುಗಳು 12 ಹಾಗೂ ನಿರುಪಯುಕ್ತ ದನದ ತ್ಯಾಜ್ಯವನ್ನು ಹಾಗೂ ದನವನ್ನು ವಧೆ ಮಾಡಲು ಬಳಸಿದ ಸೊತ್ತುಗಳನ್ನು ಮಹಜರು ಮುಖೇನ ಪೊಲೀಸರು ಸ್ವಾದೀನಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ದ ಠಾಣಾ ಅ.ಕ್ರ:40/2024.ಕಲಂ:4.7.12 ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version