Published
8 months agoon
By
Akkare Newsಪುತ್ತೂರು ಏ 18: ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಶ್ರೀ ಸೋಮಪ್ಪ ಪೂಜಾರಿ ಯವರು ಬಿಜೆಪಿ ಸೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನಗೆ ನಮ್ಮ ಕಾಂಗ್ರೆಸ್ ನಾಯಕರ ಬಗ್ಗೆ ಸ್ಪಲ್ಪ ಅತೃಪ್ತಿ ಇತ್ತು, ಇದನ್ನು ಕೆಲವರಲ್ಲಿ ವ್ಯಕ್ತ ಪಡಿಸಿದ್ದೆ. ಹಾಗೆ ಅವರು ನನ್ನನ್ನು ಬಿಜೆಪಿ ನಾಯಕರ ಸಮ್ಮುಖದಲ್ಲಿ ಸೇರ್ಪಡೆ ಮಾಡುವ ಪ್ರಕ್ರಿಯೆ ತರಾತುರಿಯಲ್ಲಿ ಮಾಡಿದರು. ಇದು ನನ್ನಿಂದಲೂ ತಪ್ಪಾಗಿದೆ.
ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಮ್. ಕೆ.ಬಿ.ಯವರು ಒಳ್ಳೆಯ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ನಾನು ಸೂಚಿಸಿದ ಓರ್ವ ಬಡ ಹೆಣ್ಣು ಮಗಳಿಗೆ ಅವರ ಕ್ಲಿನಿಕ್ ನಲ್ಲಿ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಕಾರ್ಯಕರ್ತರನ್ನು ಗೌರವದಿಂದ ನೋಡುತ್ತಿದ್ದಾರೆ,ಅವರನ್ನು ನಾನು ಮರೆಯುವ ಹಾಗಿಲ್ಲ.
ನಮ್ಮ ಭಾಗದ ವಲಯಾಧ್ಯಕ್ಷರನ್ನು ಮತ್ತು ಇತರರನ್ನು ಒಟ್ಟಿಗೆ ಸೇರಿಸಿ ಸಮಸ್ಯೆ ಬಗೆಹರಿಸಿದ್ದಾರೆ.ಹಾಗಾಗಿ ನಾನು ಕಾಂಗ್ರೆಸ್ ನಲ್ಲೇ ಇದ್ದೇನೆ, ಕಾಂಗ್ರೆಸ್ ಗಾಗಿಯೇ ದುಡಿಯುತ್ತೇನೆ. ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತಿದ್ದೇನೆ.ಸೋಮಪ್ಪ ಪೂಜಾರಿ ಬಜತ್ತೂರು – ವೊಳಾಲ್