Published
6 months agoon
By
Akkare Newsಪಂಜ : ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಪರಿಚಿತರು ಸೊತ್ತುಗಳನ್ನು ಹಾನಿಗೈದು ಎರಡು ದಿನ ಪ್ರತ್ಯೇಕವಾಗಿ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.
ಜು.4 ರಂದು ರಾತ್ರಿ ಕಾಲೇಜಿನಲ್ಲಿ ಕಳ್ಳತನ, ಕಿಟಕಿ ಗಾಜು ಒಡೆದ ಪ್ರಕರಣ ನಡೆದಿತ್ತು. ಜು.5 ರಂದು ರಾತ್ರಿ ಮತ್ತೆ ಕಳ್ಳರು ಕಾಲೇಜು ಕೊಠಾಡಿ ಬಾಗಿಲಿನ ಹಲಗೆ ಮುರಿದಿರುವುದು ಹೊಸದಾಗಿ ಹಾಕಿದ ಪ್ಯೂಸ್ ಕದ್ದಿರುವುದು ಬೆಳಕಿಗೆ ಬಂದಿದೆ.
ಪಿ.ಯು.ಕಾಲೇಜಿನಲ್ಲಿ ಕಿಟಕಿ ಗಾಜು ಒಡೆದಿದ್ದು ಮತ್ತು ಅಲ್ಲೇ ಸಮೀಪದಲ್ಲಿರುವ ಹೈಸ್ಕೂಲ್ ಕಟ್ಟದಲ್ಲಿರುವ ಸುಮಾರು 9 ವಿದ್ಯುತ್ ಪ್ಯೂಸ್, ಇಂಟರ್ನೆಟ್ ಕೇಬಲ್ ಕಳ್ಳತನ ವಾಗಿದೆ.