Published
2 years agoon
By
Akkare News
ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ಸಮಿತಿ ಸಭೆಯು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆಪಾರ್ವತಿ ಮರಕ್ಕಡರವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಭವನೀಯ ಆಸ್ತಿ ಹಾನಿ ಬಗ್ಗೆ ಮತ್ತು ನೆರೆ ನೀರು ಹರಿದು ಮನೆಗಳಿಗೆ, ಶಾಲೆಗಳಿಗೆ ಹಾನಿಯಾಗುವ ಬಗ್ಗೆ ಮುಂಜಾಗೃತ ಕ್ರಮ ವಹಿಸುವಂತೆ ಸಭೆಯಲ್ಲಿ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣರವರು ಹೇಳಿದರು. ಶಿಥಿಲಗೊಂಡಿರುವ ಶಾಲಾ ಕಟ್ಟಡ, ಮನೆಯ ಪಕ್ಕದಲ್ಲಿ ಧರೆ ಕುಸಿಯುವ ಸ್ಥಳದ ಬಗ್ಗೆಕ್ರಮ ಕೈಗೊಳ್ಳುವುದು ಹಾಗೂ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ ತೆರವುಗೊಳಿಸವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.


ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು: ಕುದ್ದಾರು ಉ. ಹಿ. ಪ್ರಾ. ಶಾಲೆಯ ಭಾವಣಿ ದುರಸ್ತಿಯ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು. ಕುದ್ಗಾರು ನಾಗಲ ರಸ್ತೆಯ ಕಾಪೆಜಾಲು ಎಂಬಲ್ಲಿ ಸೇತುವೆ ಶಿಥಿಲಗೊಂಡಿರುವ ಶಾಲಾ ಕಟ್ಟಡ, ಧರೆ ಕುಸಿಯುವ ಸ್ಥಳದ ಬಗ್ಗೆ ಕ್ರಮ ಕೈಗೊಳ್ಳಿ ಅಪಾಯಕಾರಿ ಮರ ತೆರವುಗೊಳಿಸಿ ಅಪಾಯಕಾರಿ ವಿದ್ಯುತ್ ತಂತಿ ತೆರವುಗೊಳಿಸಿ ಅಪಾಯಕಾರಿ ಸ್ಥಳಕ್ಕೆ ಸೂಚನಾ ಫಲಕ ಅಳವಡಿಸಲು ನಿರ್ಣಯ,ಕುಸಿಯುವ ಹಂತದಲ್ಲಿದ್ದು, ತಕ್ಷಣ ದುರಸ್ತಿಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಬರೆಯಲು ತೀರ್ಮಾನಿಸಲಾಯಿತು. ಕುದ್ಗಾರು ಗ್ರಾಮದ ಬರೆಪ್ಪಾಡಿ ಅಂಗನವಾಡಿ ಹತ್ತಿರ ಹಳೆ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದು, ತೆರವುಗೊಳಿಸುವಂತೆ ತೀರ್ಮಾನಿಸಲಾಯಿತು. ರಸ್ತೆ ಬದಿಯಲ್ಲಿ ಇರುವ ಮತ್ತು ಮನೆಗೆ ಅಪಾಯವಾಗುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. ಕಾಯಿಮಣ ಗ್ರಾಮದ ಅಂಕಜಾಲು ಎಂಬಲ್ಲಿ ಕುಸುಮಾ ಎಂಬವರ ಮನೆಯ ಹತ್ತಿರ ವಿದ್ಯುತ್ ತಂತಿ ಹಾದು ಹೋಗುತ್ತಿದ್ದು, ತೆರವುಗೊಳಿಸುವಂತೆ ಮೆಸ್ಕಾಂಗೆ ಬರೆಯಲು ನಿರ್ಣಯಿಸಲಾಯಿತು. ಕುದ್ಗಾರು ಗ್ರಾಮದ ಶಾಂತಿಮೊಗರು ಸೇತುವೆಯಲ್ಲಿ ವಿದ್ಯುತ್ ಲೈನ್ ಅತೀ ಕೆಳಗೆ ಹಾದು ಹೋಗಿರುವುದರಿಂದ ಬದಲಾವಣೆ ಮಾಡುವಂತೆ ಮೆಸ್ಕಾಂ ಗೆ ಬರೆಯಲು ನಿರ್ಣಯಿಸಲಾಯಿತು.
ಬೆಳಂದೂರು ಗ್ರಾಮದ ಪ್ರಗತಿ ಶಾಲಾ ಹತ್ತಿರ ಸಾರ್ವಜನಿಕ ರಸ್ತೆಯ ನದಿ ಬದಿಯಲ್ಲಿ ಕುಸಿದಿದ್ದು, ಈ ಬಗ್ಗೆ ಮುಂಜಾಗೃತಾ ಕ್ರಮಕ್ಕಾಗಿ ಸೂಚನಾ ಫಲಕ ಅಳವಡಿಸಲು ತೀರ್ಮಾನಿಸಲಾಯಿತು. ಗ್ರಾ.ಪಂ. ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ಮೋಹನ್ ಆಗಳ, ಪ್ರವೀಣ್ ಕೆರೆನಾರು, ಜಯರಾಮ ಬೆಳಂದೂರು, ಉಮೇಶ್ವರಿ ಅಗಳಿ, ಗೌರಿ ಮಾದೋಡಿ, ಗೀತಾ ಕುವೆತ್ತೋಡಿ, ಕುಸುಮಾ ಅಂಕಜಾಲು ಹಾಗೂ ಗ್ರಾಮ ಆಡಳಿತ ಲೆಕ್ಕಾಧಿಕಾರಿಗಳು, ಆರೋಗ್ಯ ಇಲಾಖೆಯವರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದವರು, ಗ್ರಾ. ಪಂ.ಸಿಬ್ಬಂದಿಗಳು ಭಾಗವಹಿಸಿದ್ದರು.
ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣರವರು ಸ್ವಾಗತಿಸಿ, ಲೆಕ್ಕ ಸಹಾಯಕಿ ಸುನಂದ ವಂದಿಸಿದರು.




