Published
5 months agoon
By
Akkare News
ಮಧ್ಯ ನೇಪಾಳದ ಮದನ್-ಆಶ್ರಿತ್ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಭಾರಿ ಭೂಕುಸಿತ ಸಂಭವಿಸಿದೆ. ಘಟನೆಯ ಪರಿಣಾಮ ಎರಡು ಬಸ್ಸುಗಳು ತ್ರಿಶೂಲಿ ನದಿಗೆ ಉರುಳಿ ಬಿದ್ದು ಸುಮಾರು 63 ಪ್ರಯಾಣಿಕರು ಮೃತರಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಎರಡೂ ಬಸ್ಸುಗಳಲ್ಲಿ ಬಸ್ ಚಾಲಕರು ಸೇರಿದಂತೆ ಒಟ್ಟು 63 ಜನರು ಇದ್ದರು ಎನ್ನಲಾಗಿದೆ.
ಮುಂಜಾನೆ 3.30ರ ಸುಮಾರಿಗೆ ಭೂಕುಸಿತವಾಗಿ ಬಸ್ಸುಗಳು ನದಿಯಲ್ಲಿ ಕೊಚ್ಚಿಕೊಂಡು ಹೋಯಿತು. ನಾವು ಘಟನಾ ಸ್ಥಳದಲ್ಲಿದ್ದೇವೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಾಣೆಯಾದ ಬಸ್ಸುಗಳನ್ನು, ಜನರನ್ನು ಹುಡುಕುವ ನಮ್ಮ ಪ್ರಯತ್ನಗಳಿಗೆ ನಿರಂತರ ಮಳೆ ಅಡ್ಡಿಯಾಗಿದೆ ಎಂದು ಚಿಟ್ವಾನ್ನ ಮುಖ್ಯ ಜಿಲ್ಲಾ ಅಧಿಕಾರಿ ಇಂದ್ರದೇವ್ ಯಾದವ್ ಎಎನ್‌ಐಗೆ ತಿಳಿಸಿದ್ದಾಗಿ ವರದಿಯಾಗಿದೆ