ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ

Published

on

ಅಧ್ಯಕ್ಷರಾಗಿ ಸತೀಶ್ ಗೌಡ, ಉಪಾಧ್ಯಕ್ಷರಾಗಿ ಅಂಬ್ರೋಸ್ ಡಿ’ಸೋಜ


ಪುತ್ತೂರು: ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಡೆದ ಗುಪ್ತ ಮತದಾನದಲ್ಲಿ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ ಹಾಗೂ ಉಪಾಧ್ಯಕ್ಷರಾಗಿ ಅಂಬ್ರೋಸ್ ಡಿ’ಸೋಜ ಚುನಾಯಿತರಾಗಿದ್ದಾರೆ.

ಚುನಾವಣಾ ಪ್ರಕ್ರಿಯೆಯು ಜ.13ರಂದು ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ ಹಾಗೂ ಎ.ಎಂ ಪ್ರವೀಣ್ ಚಂದ್ರ ಆಳ್ವ ಮುಂಡೇಲು ಕಣದಲ್ಲಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಅಂಬ್ರೋಸ್ ಡಿ’ಸೋಜ ಅಗರ್ತಬೈಲು ಹಾಗೂ ನವೀನ್ ಕರ್ಕೇರ ರಾಂಬೈಲು ಉಜ್ರುಪಾದೆ ಕಣದಲ್ಲಿದ್ದರು. ಗುಪ್ತ ಮತದಾನದ ಮೂಲಕ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸತೀಶ್ ಗೌಡ ಹಾಗೂ ಉಪಾಧ್ಯಕ್ಷರಾಗಿ ಅಂಬ್ರೋಸ್ ಡಿ’ಸೋಜ ಆಯ್ಕೆಯಾಗಿದ್ದಾರೆ.

 

ನಿರ್ದೇಶಕರಾದ ಎ.ಎಂ. ಪ್ರಕಾಶ್ ಚಂದ್ರ ಆಳ್ವ ಮುಂಡೇಲು, ಮಹಮ್ಮದ್ ಶರೀಫ್ ಬೆಳಿಯೂರುಕಟ್ಟೆ, ಕೆ.ಚಂದಪ್ಪ ಪೂಜಾರಿ ಕಾಡ್ಲ, ಸುಜಾತ ರಂಜನ್ ರೈ ಬೀಡು, ಪ್ರಮೀಳಾ ಚಂದ್ರಶೇಖರ ಗೌಡ ಬ್ರಹ್ಮರಕೋಡಿ, ಸುರೇಶ ಎನ್. ನಾರಾಜಿರಮೂಲೆ, ನಾರಾಯಣ ಎಂ. ಬಂಗಾರಡ್ಕ, ದಿನೇಶ ಕಾಣದಗುಳಿ ಉಜ್ರುಪಾದೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್ ಚುನಾವಣಾಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕೆ. ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೀತಾರಾಮ ಗೌಡ ಹಾಗೂ ಸಿಬಂದಿಗಳು ಸಹಕರಿಸಿದರು. ಸಂಘದ ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. 12 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು 10 ಮಂದಿ ಹಾಗೂ ಸಹಕಾರ ಭಾರತೀಯ 2 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version