Connect with us

ಇತ್ತೀಚಿನ ಸುದ್ದಿಗಳು

ಫಹಲ್ಗಾಮ್ ಘಟನೆ ಮಾನವಕುಲಕ್ಕೆ ಮಾರಕ–ಪದ್ಮರಾಜ್ ಆರ್. ಪೂಜಾರಿ

Published

on

ಕಾಶ್ಮೀರದ ಫಹಲ್ಗಾಮ್‌ನಲ್ಲಿ ಉಗ್ರವಾದಿಗಳಿಂದ ನಡೆದ ಪ್ರವಾಸಿಗರ ಹತ್ಯೆಯ ಹೃದಯ ವಿದ್ರಾವಕ ಟನೆ ಇಡೀ ಮಾನವ ಕುಲಕೆ ಮಾರಕ. ನ್ಯಾಯ, ನತೆ ಮತ್ತು ಶಾಂತಿ ಬಯಸುವ ಸವಾಜದಲ್ಲಿ ಹಿಂಸೆಗೆ ಸ್ಥಾನ ಇರಬಾರದು. ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಜೀವ ನಷ್ಟವು ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಆದ ಗಾಯ. ಅಮಾಯಕರ ಪ್ರಾಣಹತ್ಯೆ ಮಾಡಿರುವ ಈ ಘಟನೆ ಅತ್ಯಂತ ಖಂಡನೀಯ. ಅವಾಯಕರ ಜೀವಗಳನ್ನು ಬಲಿಯಾಗಿಸಿ, ಅನೇಕ ಕುಟುಂಬಗಳನ್ನೇ ನಾಶ ಮಾಡಿರುವುದು ಹಿಂಸಾಚಾರವಷ್ಟೇ ಅಲ್ಲ.

 

ಸಂಪೂರ್ಣ ಅವಾನವೀಯ ಕೃತ್ಯ. ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದು ಕೆಟ್ಟ ಬೆಳವಣಿಗೆ. ಈ ವಿಚಾರದಲ್ಲಿ ನಾವು ಪಕ್ಷ ಭೇದ ಮರೆತು ಕೇಂದ್ರ ಸರ್ಕಾರದ ಪರ ನಿಲ್ಲುತ್ತೇವೆ. ಭಯೋತ್ಪಾದಕರನ್ನು ನಿರ್ಮೂಲನೆಗೊಳಿಸುವ ಜೊತೆಗೆ ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಕೇಂದ್ರ ಸಮರ್ಥವಾಗಿ ನಿರ್ವಹಿಸಬೇಕು. ಇಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು. ಇಂತಹ ಸಂಘಟನೆಗಳು ಯಾವುದೇ ದೇಶಕ್ಕೆ ಸಂಬಂಧಿಸಿದರೂ ಅವುಗಳನ್ನು ಬುಡಸಮೇತ ಕಿತ್ತೊಗೆಯುವ ಕೆಲಸವಾಗಬೇಕು. ಅಮಾಯಕರನ್ನು ಕೊಂದ ಉಗ್ರರಿಗೆ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡಬೇಕು.

 

 

ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಎಂದು ಈಮೂಲಕ ಆಗ್ರಹಿಸುತ್ತೇನೆ. ದುರ್ಘಟನೆಯಲ್ಲಿ ಮೃತರ ಕುಟುಂಬಗಳಿಗೆ ದುಃಖ ಸಹಿಸುವ ಶಕ್ತಿ ಸಿಗಲಿ. ಗಾಯಗೊಂಡವರು ಶ್ರೀ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ.

ಪದ್ಮರಾಜ್ ಆರ್. ಪೂಜಾರಿ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version