Published
8 hours agoon
By
Akkare Newsಆತೂರು : ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಅಫರಾದ ನಿಗ್ರಹ & ಮಾನವ ಹಕ್ಕು ಪರಿಷತ್ ಜಿಲ್ಲಾ ಅದ್ಯಕ್ಷರಾಗಿ ಇಬ್ರಾಹಿಂ ಬಾತಿಶಾ ಆತೂರು ರವರನ್ನು ರಾಜ್ಯ ಅದ್ಯಕ್ಷರಾದ ಡಾ. ಜಾನ್ ಸ್ಯಾಮುಲ್ ರವರು ನೇಮಕ ಮಾಡಿ ಆಧೇಶಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಬಾತಿಶಾ ಆತೂರು ಅವರು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಾ ಅನೇಕ ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಇವರು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಚುನಾಯಿತ ಪ್ರಧಾನ ಕಾರ್ಯದರ್ಶಿಯಾಗಿ, ಐಬಿ ವೆಲ್ಪೆರ್ ಅಸೋಸಿಯೇಶನ್ (IBWA) ಪುತ್ತೂರು ಅದ್ಯಕ್ಷರಾಗಿ, ಬೆಂಗಳೂರು ಜಿಲ್ಲಾ ವಿಖಾಯ ಚೇರ್ ಮ್ಯಾನ್ ರಾಗಿ, ಟೀಮ್ RB ಸ್ಥಾಪಕರಾಗಿ ಕಾರ್ಯನಿರ್ವಯಿಸತ್ತಾದ್ದಾರೆ.
NSUI ಪುತ್ತೂರು ತಾಲೂಕು ಇದರ ಮಾಜಿ ಅದ್ಯಕ್ಷರಾಗಿ, ದ ಕ ಜಿಲ್ಲಾ NSUI ಪ್ರಧಾನ ಕಾರ್ಯದರ್ಶಿಯಾಗಿ, ಅಲ್ ಸಫರ್ ಹೆಲ್ಪ್ ಲೈನ್ ಆತೂರು ಬೈಲ್ ನ ಅದ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ರಾಜಕೀಯವಾಗಿ, ಸಾಮಾಜಿಕಾವಾಗಿ, ಧಾರ್ಮಿಕವಾಗಿ, ಅನೇಕ ಕಾರಣ್ಯ ಸೇವೆಯಲ್ಲಿ ಸಕ್ರಿಯವಾಗಿದ್ದರೆ.
ಇವರು ಆತೂರು ಬೈಲ್ ಮದ್ರಸದ ಮಾಜಿ ಅದ್ಯಕ್ಷರಾದ ಡಿ ಎ ಪುತ್ತುಮೋನು ಮತ್ತು ಡಿ ಎ ಶಹನಾಝ್ ರವರ ಸುಪುತ್ರ.