Published
10 months agoon
By
Akkare News
ದಿನಾಂಕ 21/05/2025 ರಂದು,*ಅರ್ಬಿ ಕುಂತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ “ಶಿವಂ” ಸಭಾಂಗಣದ ಉದ್ಘಾಟನೆಯ ಪ್ರಯುಕ್ತ* ಸಾಮೂಹಿಕ ಕುಂಕುಮಾರ್ಚನೆ ಹಾಗೂ ಲಲಿತ ಸಹಸ್ರನಾಮ ಪಾರಾಯಣವನ್ನು ದೇವಾಲಯ ಸಂವರ್ಧನ ಸಮಿತಿ ಶ್ರೀ ಪಾರ್ವತಿ ಬಳಗದಿಂದ ನೆರವೇರಿಸಲಾಗಿದ್ದು, 25 ಮಂದಿ ಮಹಿಳೆಯರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿರುತ್ತಾರೆ.
ಶ್ರೀಮತಿ ಕೃಷ್ಣ ವೇಣಿ ಪ್ರಸಾದ್ ಮುಳಿಯ ಅವರು ದೇವಿಅಪರಾಧ ಕ್ಷಮಾಪಣ ಸ್ತೋತ್ರವನ್ನು ಹೇಳಿಕೊಡುವುದರೊಂದಿಗೆ, ಅರ್ಚನೆಯ ವಿಷೇಶತೆಯನ್ನು ತಿಳಿಸಿದರು, ಶ್ರೀಮತಿ ಪ್ರಭಾವತಿ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು, ಶ್ರೀಮತಿ ಮಾಯಾ ಅತ್ರಿಜಾಲು ಹಾಗೂ ಅಲ್ಲಿನ ಅರ್ಬಿ ಶ್ರೀ ಮಹಾಲಿಗೇಶ್ವರ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರು ಕೃಷ್ಣಕುಮಾರ ಅತ್ರಿಜಾಲು ಮತ್ತು ಕಾರ್ಯದರ್ಶಿ ಪ್ರವಿಣ್ ಆಳ್ವ ಹಾಗೂ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮದ ವ್ಯವಸ್ಥೆಗೆ ಸಹಕರಿಸಿದರು.
ಈ ಸಂದರ್ಭ ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಯವರ ಉಪಸ್ಥಿತಿ ಎಲ್ಲರಲ್ಲೂ ಧನ್ಯತೆಯ ಭಾವವನ್ನು ಮೂಡಿಸಿರುತ್ತದೆ.