Published
18 hours agoon
By
Akkare News
ಉಪ್ಪಿನಂಗಡಿ: ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಅ.2ರಂದು ಹಿರೇಬಂಡಾಡಿಯಲ್ಲಿ ನಡೆದಿದ್ದು, ಅವರ ಬೈಕ್ ಹಾಗೂ ಮೊಬೈಲ್ ಉಪ್ಪಿನಂಗಡಿ ಕುಮಾರಧಾರ ಹಳೆ ಸೇತುವೆಯ ಮೇಲೆ ಪತ್ತೆಯಾಗಿದೆ.
ಹಿರೇಬಂಡಾಡಿಯ ಪೆರಾಬೆ ನಿವಾಸಿ ಮಾಧವ ಗೌಡ (44) ನಾಪತ್ತೆಯಾದ ವ್ಯಕ್ತಿ. ಆತೂರಿನಲ್ಲಿ ಟಯರ್ ಪಂಕ್ಚರ್ ಅಂಗಡಿಯನ್ನು ಇತ್ತೀಚೆಗಷ್ಟೇ ಆರಂಭಿಸಿದ್ದ ಇವರು ಅ.2ರಂದು ಮನೆಯಿಂದ ಅಂಗಡಿಗೆಂದು ತೆರಳಿದವರು ವಾಪಸ್ ಮನೆಗೆ ಬಂದಿಲ್ಲ. ಅಂಗಡಿಗೂ ತೆರಳದೇ ಮನೆಗೂ ಬಾರದೇ ನಾಪತ್ತೆಯಾಗಿದ್ದ ಇವರನ್ನು ಹುಡುಕಾಟ ನಡೆಸಿದಾಗ ಇವರ ಬೈಕ್ ಹಾಗೂ ಮೊಬೈಲ್ ಉಪ್ಪಿನಂಗಡಿಯ ಕುಮಾರಧಾರ ಹಳೆ ಸೇತುವೆಯ ಮೇಲೆ ಪತ್ತೆಯಾಗಿತ್ತು. ಈ ಬಗ್ಗೆ ಮನೆಯವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.