Published
9 months agoon
By
Akkare News
ಪುತ್ತೂರು: ದಿನಾಂಕ:03.06.2025ರಂದು ಕೋಡಿಂಬಾಡಿ ಗ್ರಾಮ ಪಂಚಾಯತದಲ್ಲಿ ನಡೆದ ‘ವಿಪತ್ತು ನಿರ್ವಹಣಾ’ ಸಮಿತಿ ಸಭೆ. ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಮಲ್ಲಿಕಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೋಡಲ್ ಅಧಿಕಾರಿ ಚೇತನ್,ಗ್ರಾಮ ಅಭಿವೃದ್ಧಿ ಅಧಿಕಾರಿ ಶರೀಫ್, ಗ್ರಾಮ ಲೆಕ್ಕಾಧಿಕಾರಿ ಶರಣ್ಯ ಮತ್ತು ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ, ಸಿಬ್ಬಂದಿಗಳು,ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು,ಅರಿವು ಕೇಂದ್ರ ದವರು, ಅರಣ್ಯಾಧಿಕಾರಿ ಉಪಸ್ಥಿತರಿದ್ದು ಸಲಹೆ, ಸೂಚನೆ ನೀಡಿದರು.




ಧರೆ ಬಿದ್ದು ತೊಂದರೆಗೀಡಾದ ಮಾರ್ಗಗಳನ್ನು ಗ್ರಾಮ ಪಂಚಾಯತ್ ಮುಖಾಂತರ ತೆರವು ಮಾಡಲಾಗುವುದು, ಮತ್ತು ಅನಾಹುತವಾದ ಮನೆಗಳ ಪಟ್ಟಿ ಮತ್ತು ಪರಿಹಾರ ನೀಡುವ ವರದಿ ಯನ್ನು ತಾಲೂಕಿಗೆ ಕಳುಹಿಸಲು ನಿರ್ಣಯಿಸಲಾಯಿತು ಮತ್ತು ಅಪಾಯದಲ್ಲಿರುವ ಕೆಇಬಿ ಕಂಬಗಳು ಮತ್ತು ಮರಗಳ ವಿವರಗಳನ್ನು ಸಭೆಯಲ್ಲಿ ನೀಡಿದರು,ಅದನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಯಿತು.











