Published
8 months agoon
By
Akkare News
ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ವಿದ್ಯಾರ್ಥಿನಿಗೆ ಪ್ರೇಮ ವಂಚನೆ ಪ್ರಕರಣದಲ್ಲಿ ಮಂಗಳೂರಿನ ಮಹಿಳಾ ಸಂಘಟನೆಗಳ ಪ್ರಮುಖರ ಜಂಟಿ ನಿಯೋಗದೊಂದಿಗೆ ಮದುವೆಯ ಭರವಸೆ ನೀಡಿ, ಕೊನೆಗಳಿಗೆಯಲ್ಲಿ ವಂಚಿಸಿ ತಲೆ ಮರೆಸಿಕೊಳ್ಳಲು ಆರೋಪಿ ಕೃಷ್ಣ ಜೆ ರಾವ್ ನಿಗೆ ಹಲವರು ಪ್ರಚೋದನೆ ನೀಡಿರುವ, ಬೆಂಬಲ ಒದಗಿಸಿರುವ, ಪರಿಹಾರ ಧನ ಪಡೆದು ಗರ್ಭಪಾತ ಮಾಡುವಂತೆ ಸಂತ್ರಸ್ತೆಯ ಕುಟುಂಬಕ್ಕೆ ಪ್ರಭಾವಿಗಳು ಒತ್ತಡ ಹೇರಿರುವ ಕುರಿತೂ ಸಂಬಂಧಪಟ್ಟವರನ್ನು ತನಿಖೆಗೆ ಒಳಪಡಿಸಿ, ಅಂತವರ ಮೇಲೆ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ಮನವಿ ಮೂಲಕ ಎಸ್ ಪಿಯವರನ್ನು ಆಗ್ರಹಿಸಲಾಯಿತು.



ನಿಯೋಗದಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಂತಿ ಬಿ ಶೆಟ್ಟಿ, ಜನವಾದಿ ಮಹಿಳಾ ಸಂಘಟನೆಯ ನಗರಾಧ್ಯಕ್ಷರಾದ ಅಸುಂತಾ ಸುಝೇ , ಕಾರ್ಯದರ್ಶಿ ಮಾಧುರಿ ಬೋಳಾರ್ , ಮುಖಂಡರುಗಳಾದ ಭಾರತೀ ಬೋಳಾರ್ , ಪ್ರಮೀಳಾ ದೇವಾಡಿಗ ಮರೋಳಿ , ದಲಿತ ಹಕ್ಕುಗಳ ಸಮಿತಿಯ ಈಶ್ವರಿ ಪದ್ಮುಂಜ, ಬೀಡಿ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ವಸಂತಿ ಕುಪ್ಪೆಪದವು, ಮೂಡಬಿದ್ರೆ ಪುರಸಭೆಯ ಮಾಜಿ ಉಪಾಧ್ಯಕ್ಷರು, ಕಾರ್ಮಿಕ ಮುಖಂಡರಾದ ರಮಣಿ ಮೂಡಬಿದ್ರೆ, ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳಾದ ಲೀಡಿಯಾ, ಜೆಸಿಂತಾ, ಅರ್ಚನಾ ಆಚಾರ್ಯ, ಮೀನಾ ಟೆಲ್ಲಿಸ್ ಮತ್ತಿತರರು ಹಾಜರಿದ್ದರು.







