Published
8 months agoon
By
Akkare News
ಕಾಂಗ್ರೆಸ್ ಪಕ್ಷದ ಆಂತರಿಕ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡೆಯೊಬ್ಬರು, ಪೂರ್ತಿ ಸಭೆಯಲ್ಲಿ ಉಪಸ್ಥಿತರಿದ್ದು ಕೊನೆಯಲ್ಲಿ ಅಧಿಕೃತವಾಗಿ ಪಕ್ಷದ ಧ್ವಜ ಸ್ವೀಕರಿಸಿ ಶಾಲು ಪಡೆದುಕೊಂಡು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ವಿಶೇಷವೆಂದರೆ ಇದಾದ ಒಂದೇ ದಿನದಲ್ಲಿಆಕೆ ಬಿಜೆಪಿ ಸಭೆಯಲ್ಲಿಪ್ರತ್ಯಕ್ಷಗೊಂಡು, ನನ್ನನ್ನು ನನಗೆ ತಿಳಿಯದಂತೆ ಕಾಂಗ್ರೆಸ್‌ಗೆ ಸೇರಿಸಿದ್ದಾರೆ, ನಾನು ಈಗಲೂ ಬಿಜೆಪಿಯಲ್ಲೇ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ..!
ಇದು ಪುತ್ತೂರು ತಾಲೂಕು ಪಂಚಾಯಿತಿಯ ಮಾಜಿ ಸದಸ್ಯೆ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ನಾಗರಾಜ್ ಪಟ್ಟೆ.
ಗುರುವಾರ ಪುತ್ತೂರು ಬಿಜೆಪಿ ಕಚೇರಿಗೆ ಬಂದ ರೇಖಾ ನಾಗರಾಜ್, ಅಲ್ಲಿಂದ ಮಾಧ್ಯಮ ಪ್ರತಿನಿಧಿಗಳಿಗೆ ಕರೆ ಮಾಡಿಸಿ ನನ್ನನ್ನು ಬಲವಂತವಾಗಿ ಕಾಂಗ್ರೆಸ್‌ಗೆ ಸೇರಿಸಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ. ಕಚೇರಿಗೆ ಮಾಧ್ಯಮ ಪ್ರತಿನಿಧಿಗಳು ಭೇಟಿ ನೀಡಿದಾಗ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮತ್ತು ನಗರ ಮಂಡಲ ಬಿಜೆಪಿ ಅಧ್ಯಕ್ಷ ಶಿವಕುಮಾರ್ ಅವರ ಜತೆಯಲ್ಲಿನಿಂತು ಹೇಳಿಕೆ ನೀಡಿ, ನಾನು ನನ್ನ ಕೆಲಸ ಮಾಡಿಸಿಕೊಳ್ಳಲು ಕಾಂಗ್ರೆಸ್ ಸಭೆಗೆ ಹೋಗಿದ್ದೆ ಎಂದು ಹೇಳಿದರು.
ಏನು ಹೇಳಿದರು ರೇಖಾ?: ನನಗೆ ಕೆಲಸವೊಂದು ಆಗಬೇಕಿತ್ತು. ಅದಕ್ಕಾಗಿ ಸಭೆಯೊಂದಕ್ಕೆ ಹೋಗಿದ್ದೆ. ಅಲ್ಲಿನನ್ನ ಪೇಪರ್ ಪರಿಶೀಲಿಸಿದ ಅವರು ಹೊರಡುವಾಗ ಜತೆಯಲ್ಲಿ ನಿಂತು ಫೊಟೋ ತೆಗೆಸಿಕೊಳ್ಳುವಂತೆ ಹೇಳಿದರು. ನಾನು ಫೊಟೋಕ್ಕೆ ನಿಂತೆ. ಅದನ್ನೇ, ಬಿಜೆಪಿ ನಾಯಕಿ ರೇಖಾ ನಾಗರಾಜ್ ಕಾಂಗ್ರೆಸ್ ಸೇರ್ಪಡೆ ಎಂದು ಪ್ರಚಾರ ಮಾಡಿದ್ದಾರೆ. ನನ್ನ ಇಡೀ ಕುಟುಂಬ ಬಿಜೆಪಿಯಲ್ಲಿದೆ. ನಾನು ತಾಪಂ ಸದಸ್ಯೆಯಾಗಿ, ಸ್ಥಾಯಿ ಸಮಿತಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದೇನೆ ಎಂದು ತಿಳಿಸಿರುತ್ತಾರೆ.