Published
7 months agoon
By
Akkare News
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿತ್ಯ ನಿರಂತರವಾಗಿ ಪ್ರತಿನಿತ್ಯ ಒಂದಿಲ್ಲೊಂದು ಗೊಂದಲ, ಕುತೂಹಲಕಾರಿ ಬೆಳವಣಿಗೆಗಳು, ಬಣಗಳ ನಡುವಿನ ತಿಕ್ಕಾಟ ನಡೆಯುತ್ತಲೇ ಇದೆ. ಈ ಮಧ್ಯೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಇಂದು ಕಾಂಗ್ರೆಸ್ ನಾಯಕನೊಬ್ಬನ ಉಚ್ಛಾಟನೆಯಾಗಿದೆ. ಅದೂ ಸಿಎಂ ಸಿದ್ದರಾಮಯ್ಯ ಅವರ ಪರಮಾಪ್ತ ಎಂದೇ ಗುರುತಿಸಿಕೊಂಡಿರುವ G.V ಸೀತಾರಾಮ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದು ಪಕ್ಷದೊಳಗಿನ ಶೀತಲ ಸಮಾರಾ ಇನ್ನಷ್ಟು ಹೆಚ್ಚಾಗುವ ಸೂಚನೆ ನೀಡಿದಂತಿದೆ.


ಸಿದ್ದರಾಮಯ್ಯರ ಪರಮಾಪ್ತ ಎಂದೇ ಗುರುತಿಸಿಕೊಂಡ G.V ಸೀತಾರಾಮ್ ಅವರನ್ನು ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿ, ಅವರ ಪ್ರಾಥಮಿಕ ಸದಸ್ಯತ್ವ ಸಹ ರದ್ದುಗೊಳಿಸಲಾಗಿದೆ. ಒಟ್ಟು 6 ವರ್ಷಗಳ ಕಾಲ ಪಕ್ಷದಿಂದ G.V ಸೀತಾರಾಮ್ ಅವರನ್ನು ಉಚ್ಚಾಟನೆಗೊಳಿಸಿ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಆದೇಶ ಹೊರಡಿಸಿದೆ.

ಇದಕ್ಕೆ ಪ್ರಮುಖ ಕಾರಣ ಒಕ್ಕಲಿಗ ಸಮುದಾಯದ ಬಗ್ಗೆ G.V ಸೀತಾರಾಮ್ ಆಡಿದ್ದ ಕೆಲವು ಮಾತುಗಳು. ವೇದಿಕೆಯೊಂದರಲ್ಲಿ ಮಾತನಾಡುವ ವೇಳೆ ಅತಿರೇಕದ ಮಾತನಾಡಿದ ಸೀತಾರಾಮ್, ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಸೀತಾರಾಮ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಿ ಆದೇಶಿಸಲಾಗಿದೆ.

ಈ ಬೆಳವಣಿಗೆ ಮೇಲ್ನೋಟಕ್ಕೆ ಶಿಸ್ತು ಸಮಿತಿಯ ಕ್ರಮ ಎನಿಸಿದರೂ, ಒಳಗೊಳಗೆ ಸಿಎಂ ಕುರ್ಚಿ ಕದನದ ಬೇಗುದಿ ತಾರಕಕ್ಕೇರುವ ಲಕ್ಷಣಗಳು ಕಂಡುಬಂದಿದೆ ಎಂದು ರಾಜಕೀಯ ಪಂಡಿತರು ವ್ಯಾಖ್ಯಾನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪರಮಾಪ್ತ ಆಗಿರುವ ಕಾರಣ ಸಹಜವಾಗಿಯ ಇದು ಸಿದ್ದುಗೆ ಮುಜುಗರ ತಂದಿದೆ ಎನ್ನಲಾಗಿದ್ದು, ಇದು ಮುಂದೆ ಯಾವ ಹಂತ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.










