Published
5 months agoon
By
Akkare News
ಪುತ್ತೂರು:ನಾಳೆ (ಸೆ.30) ರಂದು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿ ಎಂಬಂತೆ ಶಾಸಕರ ಕಚೇರಿ ಸಭಾಂಗಣದಲ್ಲಿ ಪುಡಾ ಅದಾಲತ್ ನಡೆಯಲಿದೆ. ಈ ಬಗ್ಗೆ ಶಾಸಕರು ಪುಡಾ ಸದಸ್ಯರು ಹಾಗೂ ಕಾರ್ಯದರ್ಶಿ ಜೊತೆ ಶಾಸಕರು ಸಮಾಲೋಚನೆ ನಡೆಸಿದರು. ರಾಜ್ಯದ ಲ್ಲಿ ಪ್ರಪ್ರಥಮ ಭಾರಿಗೆ ಈ ಅದಾಲತ್ ನಡೆಯುತ್ತಿದೆ.9/11 ಸಂಬಂದಿಸಿದ ಸಮಸ್ಯೆ ಹಾಗೂ ಕಡತ ವಿಲೇವಾರಿ ಸ್ಥಳದಲ್ಲೇ ಇತ್ಯರ್ಥವಾಗಲಿದೆ.

ಹಾಗೂ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಸಲಹೆಯಂತೆ ಗ್ರಾಮ ಮಟ್ಟದಲ್ಲಿ ಸಾಕು ನಾಯಿಗಳಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಶೀಘ್ರದಲ್ಲಿ ಆರಂಭವಾಗಲಿದೆ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕಾಗಿ ಪುತ್ತೂರಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಧರ್ಮಪಾಲ್ ಗೌಡ ಅವರು ವಿನಂತಿಸಿದ್ದಾರೆ.


ಸಭೆಯಲ್ಲಿ ಪುಡಾ ಅಧ್ಯಕ್ಷ ಅಮಲರಾಮಚಂದ್ರ, ಸದಸ್ಯರಾದ ಅನ್ವರ್ ಖಾಸಿಂ ,ಲ್ಯಾನ್ಸಿ ಮಸ್ಕರೇನಸ್, ನಿಹಾಲ್ ಪಿ ಶೆಟ್ಟಿ ಹಾಗೂ ಕಾರ್ಯದರ್ಶಿ ಗುರುಪ್ರಸಾದ್ ಉಪಸ್ಥಿತರಿದ್ದರು.



