Connect with us

ಇತರ

ತಿಂಗಳಿಂದ ಸಿ.ಸಿ.ಸಿಗದೆ ವಾಹನ ಮಾಲೀಕರ ಪರದಾಟ ಆರ್‌ಟಿಒ ಎಡವಟ್ಟು: ಶೀಘ್ರ ಸರಿಪಡಿಸಲು ವಾಹನಮಾಲಕರ ಅಗ್ರಹ

Published

on

ಬೆಂಗಳೂರು : ಕಳೆದ 2 ತಿಂಗಳಿಂದ ರಾಜ್ಯಾದ್ಯಂತ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ವಾಹನ ಮಾಲೀಕರಿಗೆ ತೀರುವಳಿ ಪತ್ರ (ಸಿಸಿ) ಸಿಗದ ಕಾರಣ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಹೊಸ ವಾಹನದ ಪತ್ರಕ್ಕಾಗಿ ತಂತ್ರಾಂಶದಲ್ಲಿ ನೋಂದಣಿ ಮಾಡುವ ಸಂದರ್ಭ ವಾಹನಗಳ ವೀಲ್‌ಬೇಸ್, ಕಲರ್, ಎಚ್.ಪಿ. ವಾಹನದ ಮೂಲ ಬೆಲೆ, ವಾಹನದ ವರ್ಗ, ತೂಕ, ವಿನ್ಯಾಸ, ಎಂಜಿನ್ ಘನ ಸಾಮರ್ಥ್ಯ, ದೂರವಾಣಿ ಸಂಖ್ಯೆ ಇವುಗಳನ್ನು ಸಮರ್ಪಕವಾಗಿ ನಮೂದಿಸದೆ ಇರುವುದರಿಂದ ಈಗ ವಾಹನ ಮಾಲೀಕರಿಗೆ ತೀರುವಳಿ ಪತ್ರ ಪಡೆಯಲು ತೊಂದರೆ ಉಂಟಾಗಿದೆ.


ಈ ಸಮಸ್ಯೆ ಕಳೆದ 2 ತಿಂಗಳಿಂದ ರಾಜ್ಯಾದ್ಯಂತ ಪ್ರಾರಂಭಗೊಂಡಿದೆ. ಎಷ್ಟೋ ಮಂದಿ ವಾಹನ ಮಾಲೀಕರು ತಮ್ಮ ವಾಹನವನ್ನು ಹೊರ ಜಿಲ್ಲೆಗಳಿಗೆ ಮಾರಾಟ ಮಾಡಿ, ಖರೀದಿ ಮಾಡಿದವರ ಹೆಸರಿಗೆ ಆರ್‌ಟಿಒ ಕಚೇರಿಯಲ್ಲಿ ವಾಹನ ವರ್ಗಾವಣೆಗೊಳ್ಳದೆ, ವಾಪಸ್ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ವಾಹನ ಶೋ ರೂಮ್‌ನಲ್ಲಿಯೇ ನೋಂದಣಿ ಆಗುವುದಕ್ಕಿಂತ ಮೊದಲು ಆರ್‌ಟಿಓ ಕಚೇರಿಗಳಲ್ಲಿ ವಾಹನದ ದಾಖಲಾತಿಗಳನ್ನು ಗಣಕ ಯಂತ್ರಗಳಲ್ಲಿ ಆಳವಡಿಸುವ ಸಂದರ್ಭದಲ್ಲಿಈಗ ವಾಹನಗಳ ತೀರುವಳಿ ಪತ್ರ ನೀಡುವ ಸಂದರ್ಭ ಈ ಹಿಂದೆ ಆರ್‌ಟಿಒ ಇಲಾಖೆಯಿಂದಾದ ತಪ್ಪುಗಳನ್ನು ತೋರಿಸಿ, ತೀರುವಳಿ ಪತ್ರ ನೀಡದೇ ತಡೆ ಆರ್‌ಸಿ ದಾಖಲೆಯಲ್ಲಿ ವಾಹನದ ಬಣ್ಣವನ್ನು ನಮೂದಿಸದೆ ಇರುವುದು.

ಇದರಿಂದ ವಾಹನ ಮಾಲೀಕರಿಗೆ ತೀವ್ರ ತೊಂದರೆಯಾಗುತ್ತಿದೆ. ಆದರೂ ಕೂಡ ತಂತ್ರಾಂಶದ ದೋಷವನ್ನು ಇದುವರೆಗೂ ಸರಿಪಡಿಸಿಕೊಂಡಿಲ್ಲ. ಕೂಡಲೆ ಲೋಪದೋಷಗಳನ್ನು ಸರಿಪಡಿಸಿ ಸಮರ್ಪಕ ಸೇವೆ ನೀಡಲು ಆರ್ ಟಿಒ ಇಲಾಖೆ ಮುಂದಾಗಬೇಕೆಂಬುದು ವಾಹನ ಮಾಲೀಕರ ಆಗ್ರಹವಾಗಿದೆ.ಆರ್‌ಸಿ ದಾಖಲೆಯಲ್ಲಿ ವಾಹನದ ವೀಲ್ ಬೇಸ್ ಶೂನ್ಯ ಎಂದು ನಮೂದಿಸಿರುವುದು.ತಂತ್ರಾಂಶದ ದೋಷದಿಂದ ಈ ಸಮಸ್ಯೆ ಕಳೆದ 2 ತಿಂಗಳಿಂದ ರಾಜ್ಯದಲ್ಲಿಯೇ ಉಂಟಾಗಿದೆ.


 

Continue Reading
Click to comment

Leave a Reply

Your email address will not be published. Required fields are marked *

Advertisement